over-the-counter ಓವರ್‍ದಕೌಂಟರ್‍
ಗುಣವಾಚಕ
  1. (ಸರಕುಗಳ ಮಾರಾಟದ ವಿಷಯದಲ್ಲಿ) ನೇರವಾದ; ಸಾಕ್ಷಾತ್ತಾದ; ಪ್ರತ್ಯಕ್ಷವಾದ; ಎದುರೆದುರಿಗೆ ನಡೆದ: over-the-counter sale ನೇರ ಮಾರಾಟ.
  2. (ಔಷಧಗಳ ವಿಷಯದಲ್ಲಿ) ನೇರ ಮಾರಾಟದ; ಮುಕ್ತ ಮಾರಾಟದ; ವೈದ್ಯರ ಸಲಹೆಯ ಚೀಟಿ ಇಲ್ಲದೆ, ಆದರೂ ಕಾನೂನುಸಮ್ಮತವಾಗಿ ಮಾರಾಟಮಾಡುವ: over-the-counter drugs ಮುಕ್ತ ಮಾರಾಟದ ಔಷಧಗಳು.