over- ಓವರ್‍-
ಪೂರ್ವಪ್ರತ್ಯಯ
  1. (ಉತ್ತರಪದಕ್ಕೆ ವಿಶೇಷಣವಾಗಿ) ಮೇಲಣ, ಹೊರಗಣ, ಮೇಲ್ತರದ, ತಲೆಕೆಳಗಾದ, ಅಧಿಕ, ಮಿಗಿಲಾದ, ಮೇಲಿನ ಸ್ಥಾನಕ್ಕೆ ಯಾ ಸ್ಥಾನದಲ್ಲಿ ಎಂಬ ಅರ್ಥಗಳಲ್ಲಿ ಪ್ರಯೋಗ: overcoat, overlord, overtime.
  2. (ಉತ್ತರಪದಕ್ಕೆ ವಿಶೇಷಣವಾಗಿ ಸೇರಿ) ನಾಮಪದ, ಗುಣವಾಚಕ ಯಾ ಕ್ರಿಯಾವಿಶೇಷಣಗಳನ್ನು ರೂಪಿಸುವಲ್ಲಿ: over-all, over-board.
  3. ಕ್ರಿಯಾಪದಗಳಿಗೆ ಪೂರ್ವಪದವಾಗಿ ಸೇರಿ ಹಲವೊಮ್ಮೆ ವಿಶೇಷಾರ್ಥ ಕೊಡುವ ಪದಗಳನ್ನು ರೂಪಿಸುವಲ್ಲಿ: over-brim, over-come,
  4. (ಅಧಿಕರಣಾರ್ಥಗಳಲ್ಲಿ ಕ್ರಿಯಾವಿಶೇಷಣವಾಗಿ) ಮೇಲೆ; ಉಪರಿ; ಮರೆಯಾಗಿ; ಮೇಲ್ಪದರವಾಗಿ; ಮೇಲಿಂದ ಕೆಳಕ್ಕೆ; ಊರ್ಧ್ವಮುಖವಾಗಿ; ಮೇಲಿಂದ ಕೆಳಕ್ಕೆ; ಊರ್ಧ್ವಮುಖವಾಗಿ ಯಾ ಕೆಳಗಿಂದ ಮೇಲಕ್ಕೆ; ಕಳೆದು ಹೋಗಿ; ಮೀರಿ; ಜೊತೆಗೆ; ಅಲ್ಲದೆ: overarch, overbear.
  5. (ಸಕರ್ಮಕ ಧಾತುವಿನೊಡನೆ ಕ್ರಿಯಾವಿಶೇಷಣವಾಗಿ ಸೇರಿ) ಸಾರ್ಥಕವಾಗಿ ಯಾ ಸಫಲವಾಗಿ, ಸಂಪೂರ್ಣವಾಗಿ ಎಂಬರ್ಥಗಳಲ್ಲಿ ಪ್ರಯೋಗ: over-awe.
  6. (ಕ್ರಿಯಾಪದ, ಗುಣವಾಚಕ, ಕ್ರಿಯಾವಿಶೇಷಣ ಯಾ ನಾಮಪದಗಳಿಗೆ ಕ್ರಿಯಾವಿಶೇಷಣವಾಗಿ ಇಲ್ಲವೆ ಗುಣವಾಚಕವಾಗಿ ಸೇರಿ) ಅಪೇಕ್ಷಣೀಯ ಯಾ ನಿರ್ದಿಷ್ಟ ಪರಿಮಿತಿ ಮೀರಿ, ಸತ್ಯಾಂಶ ಮೀರಿ, ಮೊದಲಾದ ಅರ್ಥಗಳಲ್ಲಿ: over-laden, over-work.
  7. (ಆತ್ಮಾರ್ಥಕವಾಗಿ self ಎಂಬ ಕರ್ಮಪದವನ್ನು ಹೊಂದುವ ಇಲ್ಲವೆ ಭೂತಕೃದಂತವಾಗಿ ಪ್ರಯೋಗವಾಗುವ ಕ್ರಿಯಾಪದಗಳನ್ನು ರೂಪಿಸುವಾಗ) ‘ಅತಿಯಾಗಿ ಮಾಡುವುದರಿಂದ ತನಗೇ ಕೇಡುಂಟುಮಾಡಿಕೊ’ ಎಂಬ ಅರ್ಥದಲ್ಲಿ: over-eat, over-sleep.
  8. (ಧಾತುವಿಗೆ ಯಾ ಧಾತುವಿನ ನಿಷ್ಪತ್ತಿಗೆ, ಇಲ್ಲವೆ ಗುಣವಾಚಕಕ್ಕೆ ಪೂರ್ವಪದವಾಗಿ ಸೇರಿ) -ಕ್ಕಿಂತ ಹೆಚ್ಚಾಗಿ, ಅಧಿಕವಾಗಿ, ಅಧಿಕತರವಾಗಿ, ಅನಪೇಕ್ಷಿತ ಮಟ್ಟಕ್ಕೆ ಎಂಬ ಅರ್ಥಗಳಲ್ಲಿ: overbalance, overdue.
  9. (ಅಕರ್ಮಕ ಧಾತುವಿಗೆ ಪೂರ್ವಪದವಾಗಿ ಸೇರಿ ಸಕರ್ಮಕ ಧಾತುವನ್ನು ರಚಿಸಿ, ಇಲ್ಲವೆ ನಾಮಪದಕ್ಕೆ ಪೂರ್ವಪದವಾಗಿ ಸೇರಿ ಸಕರ್ಮಕ ಧಾತುಗಳನ್ನು ರಚಿಸುವಾಗ) ಮಿಗಿಲಾಗಿ, ಮೀರಿ, ಅತಿಶಯವಾಗಿ ಎಂಬ ಅರ್ಥಗಳಲ್ಲಿ ಪ್ರಯೋಗ: overbuild, overcast.