ovation ಓವೇಷನ್‍
ನಾಮವಾಚಕ
  1. (ರೋಮನ್‍ ಚರಿತ್ರೆ) ಲಘು ವಿಜಯೋತ್ಸವ; ಮಹಾವಿಜಯೋತ್ಸವವನ್ನು ಆಚರಿಸಲು ತಕ್ಕ ವಿಜಯಕ್ಕಿಂತ ಕಡಿಮೆ ಮಟ್ಟದ ವಿಜಯವನ್ನು ಗಳಿಸಿದ ಸೇನಾನಾಯಕನ ವಿಜಯವನ್ನು ಅಭಿನಂದಿಸುವ ಸಲುವಾಗಿ ಆಚರಿಸುವ ಸಮಾರಂಭ.
  2. ಉತ್ಸಾಹಪೂರ್ಣ ಸ್ವಾಗತ.
  3. ಜಯಘೋಷ; (ಮುಖ್ಯವಾಗಿ) ಸಹಜವಾಗಿ ಸ್ವಪ್ರೇರಣೆಯಿಂದ ಮಾಡುವ ಸುದೀರ್ಘವಾದ ಜಯಘೋಷ, ಕರತಾಡನ.
ಪದಗುಚ್ಛ

standing ovation ಜನಸ್ತೋಮವು ಯಾ ಪ್ರೇಕ್ಷಕರು ಬಹುಕಾಲ ನಿಂತು ಚಪ್ಪಾಳೆ ತಟ್ಟಿ ಮಾಡುವ ಜಯಘೋಷ.