outweigh ಔಟ್‍ವೇ
ಸಕರ್ಮಕ ಕ್ರಿಯಾಪದ
  1. ಮೌಲ್ಯ, ಪ್ರಾಮುಖ್ಯ ಯಾ ಪ್ರಭಾವದಲ್ಲಿ (ಬೇರೊಬ್ಬನನ್ನು, ಬೇರೊಂದನ್ನು) ಮೀರಿಸು: the advantages outweighed the disadvantages ಅನುಕೂಲಗಳು ಪ್ರತಿಕೂಲಗಳಿಗಿಂತ ಹೆಚ್ಚಾಗಿದ್ದವು.
  2. ಅತಿ ಭಾರವಾಗು; ಭಾರ ತಡೆಯಲಾರದಷ್ಟಾಗು: if the load outweighs the supports, the whole thing will collapse ಊರೆಗಳಿಗಿಂತ ಭಾರ ಹೆಚ್ಚಾದರೆ ಇಡಿಯಾಗಿ ಎಲ್ಲವೂ ಕುಸಿದು ಬೀಳುತ್ತದೆ.
  3. (ಇನ್ನೊಂದಕ್ಕಿಂತ) ಹೆಚ್ಚು ತೂಗು; ಹೆಚ್ಚು ತೂಕ ಹೊಂದಿರು; ತೂಕದಲ್ಲಿ (ಬೇರೊಂದನ್ನು) ಮೀರು: the champion will probably outweigh his rival ಜಗಜಟ್ಟಿ ತನ್ನ ಪ್ರತಿಸ್ಪರ್ಧಿಯನ್ನು ತೂಕದಲ್ಲಿ ಬಹುಶಃ ಮೀರಿಸಬಹುದು.