outwear ಔಟ್‍ವೇರ್‍
ಸಕರ್ಮಕ ಕ್ರಿಯಾಪದ
(ಭೂತರೂಪ outwore, ಭೂತಕೃದಂತ outworn).
  1. ಹೆಚ್ಚು ಕಾಲ ಉಳಿ, ಬಾಳಿಕೆ ಬರು: it outwears all competition ಎಲ್ಲ ಪ್ರತಿಸ್ಪರ್ಧಿ ಸರಕುಗಳಿಗಿಂತಲೂ ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ.
  2. ಬೆಳೆಯುತ್ತಾ ಬಂದಂತೆ ಯಾವುದೇ ದೋಷಗಳನ್ನು ಕಳೆದುಕೊ: he will outwear those weaknesses ಬೆಳೆಯುತ್ತಾ ಬಂದಂತೆಲ್ಲ ಅವನು ಆ ದೌರ್ಬಲ್ಯಗಳನ್ನು ಕಳೆದುಕೊಳ್ಳುತ್ತಾನೆ.
  3. ಉಟ್ಟು, ತೊಟ್ಟು–ಸವೆಸು, ಹರಿದುಹಾಕು: a child quickly outwears his clothes ಮಗು ತನ್ನ ಉಡುಪುಗಳನ್ನು ಬೇಗ ಸವೆಸಿ ಹಾಕುತ್ತದೆ.
  4. ಬಲ, ಸಹಿಷ್ಣುತೆಗಳನ್ನು–ತಗ್ಗಿಸು, ಕುಗ್ಗಿಸು: the daily toil had soon outworn him ನಿತ್ಯದ ದುಡಿಮೆ ಅವನ ಬಲವನ್ನೆಲ್ಲ ಬೇಗ ಕುಗ್ಗಿಸಿ ಬಿಟ್ಟಿತು.
  5. ಕಾಲವನ್ನು, ಹೊತ್ತನ್ನು–ಕಳೆ, ಸವೆಸು, ಹೋಗಿಸು: I am trying to outwear the hours by reading detective fiction ಪತ್ತೇದಾರಿ ಕಥೆ ಕಾದಂಬರಿಗಳನ್ನು ಓದುತ್ತಾ ಹೊತ್ತನ್ನು ಕಳೆಯಲು ಯತ್ನಿಸುತ್ತಿದ್ದೇನೆ.