See also 2outward  3outward
1outward ಔಟ್‍ವರ್ಡ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಹೊರಗಣ; ಹೊರಗಡೆಯ; ಬಾಹ್ಯ: the outward man ಮಾನವನ ಹೊರರೂಪ, (ಆತ್ಮಕ್ಕೆ ವಿರುದ್ಧವಾಗಿ) ದೇಹ.
  2. ಹೊರಮುಖವಾದ; ಬಹಿರ್ಮುಖ; ಹೊರಗಡೆಗೆ ತಿರುಗಿರುವ.
  3. ಹೊರಸಾಗುವ; ಬಹಿರ್ಗಾಮಿ; ನಿರ್ಗಮನದ; ಹೊರಕ್ಕೆ ಹೊರಡುವ, ಸೂಸುವ, ಹರಿಯುವ, ಹೊಮ್ಮುವ: the outward flow of gold ಚಿನ್ನದ ಹೊರ ಹರಿವು; ವಿದೇಶಗಳಿಗೆ ಚಿನ್ನದ ಸಾಗಣೆ. on the outward journey ನಿರ್ಗಮನ ಯಾತ್ರೆಯಲ್ಲಿ; ಹೊರ ಪ್ರಯಾಣದಲ್ಲಿ.
  4. ಶಾರೀರಿಕ; ದೈಹಿಕ.
  5. ಹೊರರೂಪದ; ಬಾಹ್ಯರೂಪದ; ವಾಸ್ತವಿಕ; ಚಿಂತನೆಯ ಯಾ ಮಾನಸಿಕ ವಿಷಯಗಳಿಗೆ ಸಂಬಂಧಿಸದ.
  6. ವಾಸ್ತವಿಕ; ಚಿಂತನೆಯ ಯಾ ಮಾನಸಿಕ ವಿಷಯಗಳಿಗೆ ಸಂಬಂಧಿಸದೆ, ಬಾಹ್ಯ ಪ್ರಪಂಚಕ್ಕೆ ಸೇರಿದ.
  7. ಗೋಚರವಾಗುವ; ದೃಶ್ಯ.
  8. ತೋರ್ಕೆಯ; (ಆಂತರಿಕ ಭಾವಗಳಿಗೆ ಸಂಬಂಧಿಸದೆ) ಹೊರಗೆ ತೋರಿಸುವ, ಪ್ರದರ್ಶಿಸುವ, ಪ್ರಕಟಿಸುವ: show of grief ದುಃಖದ ತೋರ್ಕೆ.
  9. ಮೇಲ್ನೋಟದ; ಮೇಲುಮೇಲಿನ.
  10. ಹೊರಗಿನಿಂದ ಬರುವ, ಸಂಭವಿಸುವ, ಬಾಹ್ಯ: outward influences ಹೊರಗಿನ ಪ್ರಭಾವಗಳು.
  11. ಹೊರಗಣ; ಹೊರಗಿರುವ; ಹೊರ: an outward court ಹೊರ ಅಂಗಳ; ಹೊರಾಂಗಣ.
ಪದಗುಚ್ಛ
  1. the outward eye ಹೊರಗಣ್ಣು; ಸ್ಥೂಲ ಚಕ್ಷುಸ್ಸು (mind’s eyeಗೆ ಭಿನ್ನವಾದದ್ದು).
  2. to outward seeming ಹೊರನೋಟಕ್ಕೆ; ಆಪಾತದೃಷ್ಟಿಗೆ.
See also 1outward  3outward
2outward ಔಟ್‍ವರ್ಡ್‍
ಕ್ರಿಯಾವಿಶೇಷಣ

ಹೊರಮುಖವಾಗಿ; ಹೊರಗಡೆಗೆ; (ರೇವು ಮೊದಲಾದವುಗಳಿಂದ) ಹೊರಕ್ಕೆ: a ship bound outward(s) (ರೇವಿನಿಂದ) ನಿರ್ಗಮಿಸುತ್ತಿರುವ, ಹೊರಕ್ಕೆ ಹೊರಟಿರುವ ಹಡಗು.

See also 1outward  2outward
3outward ಔಟ್‍ವರ್ಡ್‍
ನಾಮವಾಚಕ
  1. ಹೊರರೂಪ; ತೋರ್ಕೆ; ಬಾಹ್ಯರೂಪ: so fair an outward and such stuff within ಹೊರಗೆಷ್ಟು ಥಳಕು, ಒಳಗೆಷ್ಟು ಕೊಳಕು; ಹೊರಗೆಷ್ಟು ಸೊಗಸೋ ಒಳಗಷ್ಟೇ ಹೊಲಸು.
  2. (ಬಹುವಚನದಲ್ಲಿ) ಹೊರಗಣ ವಸ್ತುಗಳು, ವಿಷಯಗಳು; ಬಾಹ್ಯ ವಸ್ತುಗಳು.
  3. (ಪ್ರಾಚೀನ ಪ್ರಯೋಗ) ಬಾಹ್ಯ ಜಗತ್ತು; ಬೌತಿಕ ಪ್ರಪಂಚ.