outtell ಔಟ್‍ಟೆಲ್‍
ಸಕರ್ಮಕ ಕ್ರಿಯಾಪದ
  1. ಕಥನ ಮಾಡುವುದರಲ್ಲಿ ಮೀರಿಸು; ಪ್ರಭಾವಪೂರ್ಣವಾಗಿ ಹೇಳು: the narration outtells all comment ಈ ಕಥನವು ಟೀಕೆಯೆಲ್ಲವನ್ನೂ ಮೀರಿಸುವಷ್ಟು ಪ್ರಭಾವ ಪೂರ್ಣವಾಗಿದೆ.
  2. ಕೊನೆಯವರೆಗೂ ಹೇಳಿಬಿಡು; ಹೇಳಿ ಮುಗಿಸಿಬಿಡು: he outtold the tale to the amazed listeners ಬೆರಗಾಗಿ ಕೇಳುತ್ತಿದ್ದ ಶ್ರೋತೃಗಳಿಗೆ ಅವನು ತನ್ನ ಕಥೆಯನ್ನು ಕೊನೆಯವರೆಗೂ ಹೇಳಿ ಮುಗಿಸಿದ.
  3. ಮುಚ್ಚು ಮರೆಯಿಲ್ಲದೆ ಹೇಳಿಬಿಡು: the guilty heart outtells its inmost thoughts ತಪ್ಪಿತಸ್ಥ ಹೃದಯ ಅಂತರಾಳದಲ್ಲಡಗಿರುವ ವಿಚಾರಗಳನ್ನೂ ಮುಚ್ಚುಮರೆಯಿಲ್ಲದೆ ಹೇಳಿಬಿಡುತ್ತದೆ.