outstrip ಔಟ್‍ಸ್ಟ್ರಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outstripped, ವರ್ತಮಾನ ಕೃದಂತ outstripping).
  1. (ಬೇರೊಬ್ಬನನ್ನು, ಬೇರೊಂದನ್ನು) ಹಾದು, ದಾಟಿ–ಹೋಗು; ಮೀರು; (ಬೇರೊಬ್ಬನಿಗಿಂತ, ಬೇರೊಂದಕ್ಕಿಂತ) ಮಿಗಿಲಾಗು: the supply far outstrips the demand ಪೂರೈಕೆ ಬೇಡಿಕೆಗಿಂತ ತುಂಬ ಮಿಗಿಲಾಗಿದೆ.
  2. (ಓಟ ಮೊದಲಾದವುಗಳಲ್ಲಿ ಬೇರೊಬ್ಬನನ್ನು, ಬೇರೊಂದನ್ನು) ಮೀರಿಸು; ಹಿಂದೆ ಹಾಕು: a car that can outstrip the fastest train ಅತ್ಯಂತ ವೇಗವಾದ ರೈಲನ್ನೂ ಮೀರಿಸುವ ಕಾರು.
  3. (ಪಂದ್ಯ, ಮುನ್ನಡೆ, ಸಾಮರ್ಥ್ಯ, ಸ್ಪರ್ಧೆ, ಮೊದಲಾದವುಗಳಲ್ಲಿ ಎದುರಾಳಿಗಳನ್ನು) ಮೀರಿಸು; (ತನ್ನನ್ನೇ) ಮೀರಿಸಿಕೊ: he has outstripped his own previous record ಅವನು ತನ್ನದೇ (ಹಿಂದಿನ) ದಾಖಲೆಯನ್ನು ಮೀರಿಸಿದ್ದಾನೆ.