See also 2outsize
1outsize ಔಟ್‍ಸೈಸ್‍
ನಾಮವಾಚಕ
  1. (ಉಡುಪುಗಳಲ್ಲಿ, ಅಳತೆ ಮೊದಲಾದವಲ್ಲಿ) ಅತಿಗಾತ್ರ; ಅಸಾಮಾನ್ಯವಾದ ಇಲ್ಲವೇ ಗಾತ್ರಕ್ಕೆ ತಕ್ಕುದಲ್ಲದ ಗಾತ್ರ.
  2. (ಸಾಮಾನ್ಯ) ಅಳತೆಗಿಂತ ಮೀರಿದ, ಅತಿ ಪ್ರಮಾಣದ, ಅತಿಗಾತ್ರದ–ಉಡುಪು.
  3. (ರೂಪಕವಾಗಿ) ಅತಿಪ್ರಮಾಣ; ಅಸಾಮಾನ್ಯ ಬೆಳೆವಣಿಗೆ.
  4. ಅತಿಗಾತ್ರದ ವ್ಯಕ್ತಿ ಯಾ ವಸ್ತು.
See also 1outsize
2outsize ಔಟ್‍ಸೈಸ್‍
ಗುಣವಾಚಕ
  1. (ಸಾಮಾನ್ಯವಾದದ್ದಕ್ಕಿಂತ ಮೀರಿದ) ಅತಿಗಾತ್ರದ; ಅತಿಸ್ಥೂಲವಾದ; ಅತಿ ಭಾರದ ಯಾ ಅತಿ ವಿಸ್ತಾರದ: outsize woman ಅತಿ ಗಾತ್ರದ ಹೆಂಗಸು.
  2. ಉಡುಪುಗಳು (ಮೊದಲಾದವುಗಳ ವಿಷಯದಲ್ಲಿ) ಅಳತೆ ಮೀರಿದ; ಅತಿಗಾತ್ರದ; ತುಂಬ ದೊಡ್ಡ ಸೈಜಿನ: outsize dresses ಅತಿ ಗಾತ್ರದ ಉಡುಪುಗಳು.