outsider ಔಟ್‍ಸೈಡರ್‍
ನಾಮವಾಚಕ
  1. (ಯಾವುದೇ ಆವರಣ, ಎಲ್ಲೆ, ಮೊದಲಾದವುಗಳ) ಒಳಗಿಲ್ಲದ, ಹೊರಗಿರುವ, ಹೊರಗಿನ, ಹೊರಗಣ–ವ್ಯಕ್ತಿ; ಹೊರಗಿನವನು; ಹೊರ; ಪರ.
  2. (ಒಂದು ವೃತ್ತ, ಮಂಡಲಿ, ಪಕ್ಷ, ವೃತ್ತಿ, ಮೊದಲಾದವಕ್ಕೆ ಸೇರಿರದ)
    1. ಹೊರಗಿನವನು; ಬಾಹ್ಯ.
    2. ಅನ್ಯ; ಪರ; ದಾಖಲಾಗಿಲ್ಲದವನು; ಪ್ರವೇಶ ಪಡೆದಿಲ್ಲದವನು.
    3. ಅದೀಕ್ಷಿತ; ಲೌಕಿಕ; (ಯಾವುದೇ ಧರ್ಮ, ಪಂಥ, ಮೊದಲಾದವುಗಳ) ದೀಕ್ಷೆ ಪಡೆದಿಲ್ಲದವನು.
  3. ಸಾಮಾನ್ಯ; (ಯಾವುದೇ ಸಂಘ ಮೊದಲಾದವಕ್ಕೆ ಬೇಕಾದ) ವಿಶೇಷ ಜ್ಞಾನ, ಶಿಕ್ಷಣ, ಮೊದಲಾದವು ಇಲ್ಲದವನು.
  4. ಅನರ್ಹ; ಬಾಹಿರ; ಶಿಷ್ಟ ವರ್ಗ, ಸಮಾಜಗಳಲ್ಲಿ ಬೆರೆಯಲು ಅರ್ಹನಲ್ಲದವನು: he is a rank outsider ಅವನೊಬ್ಬ ಅನರ್ಹನಾದ ಹೊರಗಿನವನು; ಅವನು ಶಿಷ್ಟ ಸಮಾಜಕ್ಕೆ ತಕ್ಕವನಲ್ಲದ ಹೊರಗಿನವನು.
  5. ಅಜ್ಞಾತ:
    1. (ಗೆಲ್ಲುವ ಯಾ ಯಶಸ್ವಿಯಾಗುವ ಅವಕಾಶವಿಲ್ಲವೆಂದು ಭಾವಿಸಲ್ಪಟ್ಟ ಸ್ಪರ್ಧಾಳು, ಅರ್ಜಿದಾರ, ಮೊದಲಾದ) ಅಜ್ಞಾತ ವ್ಯಕ್ತಿ.
    2. (ಕುದುರೆ ಪಂದ್ಯದಲ್ಲಿ ಗೆಲ್ಲುವ ಸಂಭವವೇ ಇಲ್ಲದ) ಅಜ್ಞಾತ ಕುದುರೆ; ಹೆಸರೇ ಕೇಳಿರದ ಕುದುರೆ.