See also 2outright
1outright ಔಟ್‍ರೈಟ್‍
ಕ್ರಿಯಾವಿಶೇಷಣ
  1. ಪೂರ್ತಿಯಾಗಿ; ಸಾರಾಸಗಟಾಗಿ; ಸಂಪೂರ್ಣವಾಗಿ; (ಈಗಷ್ಟು ಆಗಷ್ಟು ಎನ್ನದೆ) ಒಮ್ಮೆಗೇ; ಒಟ್ಟಿಗೆ: buy outright ಪೂರ್ತಿಯಾಗಿ, ಒಮ್ಮೆಗೇ ಕೊಂಡುಕೊ.
  2. ಒಮ್ಮೆಲೇ; ಒಂದೇ ಏಟಿಗೆ; ಕೂಡಲೇ ತಕ್ಷಣವೇ: kill outright ಒಮ್ಮೆಲೇ ಕೊಂದುಬಿಡು.
  3. ಸ್ವಲ್ಪವೂ ಬಿಡದೆ; ಅರೆಬರೆಯಲ್ಲದೆ; ಕೊಂಚವೂ ಉಳಿಸದೆ; ಎಲ್ಲವನ್ನೂ ಒಮ್ಮೆಗೇ, ಒಟ್ಟಿಗೆ: do the job outright ಕೆಲಸವನ್ನು ಸ್ವಲ್ಪವೂ ಬಿಡದೆ ಮಾಡಿಬಿಡು, ಬಾಕಿಯಿಡದೆ ಪೂರೈಸು.
  4. ಸ್ಪಷ್ಟವಾಗಿ; ಬಹಿರಂಗವಾಗಿ; ಮುಚ್ಚುಮರೆ ಇಲ್ಲದೆ; ಏನನ್ನೂ ಮರೆಮಾಚದೆ: tell the truth outright ನಿಜವನ್ನು ಏನೂ ಅಡಗಿಸದೆ, ಮರೆಮಾಚದೆ ಹೇಳಿಬಿಡು.
See also 1outright
2outright ಔಟ್‍ರೈಟ್‍
ಗುಣವಾಚಕ
  1. ಪೂರ್ತಿಯಾದ; ಸಂಪೂರ್ಣವಾದ: an outright loss ಪೂರ್ತಿ ನಷ್ಟ.
  2. ನೇರವಾದ; ಸ್ಪಷ್ಟವಾದ; ಮುಚ್ಚುಮರೆಯಿಲ್ಲದ; ಸಂಕೋಚ ದಾಕ್ಷಿಣ್ಯಗಳಿಲ್ಲದ; ನಿಷ್ಠುರ: an outright refusal ನೇರವಾದ ನಿರಾಕರಣೆ.
  3. ಪರಮ; ಶುದ್ಧಾಂಗ: an outright rogue ಪರಮನೀಚ.
  4. ಮುಚ್ಚುಮರೆಯಿಲ್ಲದ; ಏನನ್ನೂ ಮರೆಮಾಚದ: an outright confession ಮುಚ್ಚುಮರೆಯಿಲ್ಲದ ತಪ್ಪೊಪ್ಪಿಗೆ.
  5. ನಿರ್ವಿವಾದವಾದ; ನಿಸ್ಸಂದಿಗ್ಧವಾದ; ಸ್ಪಷ್ಟವಾದ: the outright winner ನಿರ್ವಿವಾದವಾದ ಜಯಶಾಲಿ; ಸ್ಪಷ್ಟವಾಗಿ ಗೆಲ್ಲುವವ.