outrigger ಔಟ್‍ರಿಗರ್‍
ನಾಮವಾಚಕ
  1. (ನೌಕಾಯಾನ) ಮಗ್ಗುಲ ತೇಲುದಿಂಡು; ಪಕ್ಕದ ತೇಲುದೂಲ; (ಹೊರಕ್ಕೆ ಇಳಿಸಿದ ದೂಲ, ತೊಲೆ, ಜಂತಿ, ತೇಲುವೆ, ಮೊದಲಾದವುಗಳಿಗೆ ಆಸರೆಯಾಗಿರುವ, ಹಡಗಿನ ಹೊರಗೆ ಚಾಚಿರುವ) ಹೊರ ಚೌಕಟ್ಟು.
  2. (ಯಾವುದೇ ಪ್ರಧಾನ ಕಟ್ಟಡದ ಹೊರಗೆ ಚಾಚಿಕೊಂಡಿರುವ) ಹೊರ ಆಸರೆ; ಚಾಚೂರೆ.
  3. (ಗಾಡಿಯ ಈಚುಮರದಿಂದಾಚೆಗೆ ಹೆಚ್ಚು ಕುದುರೆಗಳನ್ನು ಕಟ್ಟಲು ಅನುಕೂಲಿಸುವಂತೆ) ಚಾಚಿದ ಅಡ್ಡಮರ; ಚಾಚು ನೊಗ.
  4. ಚಾಚು ನೊಗದ ಕುದುರೆ; (ಗಾಡಿಯ) ಅಡ್ಡಮರಕ್ಕೆ ಕಟ್ಟಿದ ಕುದುರೆ.
  5. (ದೋಣಿಯಲ್ಲಿ) ಹುಟ್ಟನ್ನು ಆನಿಸುವ–ಪೀಠ, ಬಂಕ.
  6. ಹುಟ್ಟಿನ ಪೀಠವುಳ್ಳ ದೋಣಿ.
  7. (ವಿಮಾನದಿಂದ ಹೊರಚಾಚಿರುವ ಯಾವುದೇ) ಹೊರ ಚೌಕಟ್ಟು; ಚಾಚು ಚೌಕಟ್ಟು.