outrider ಔಟ್‍ರೈಡರ್‍
ನಾಮವಾಚಕ
  1. (ವಾಹನದ ಮುಂದೆ, ಹಿಂದೆ, ಯಾ ಜೊತೆಯಲ್ಲಿ ಸವಾರಿ ಮಾಡಿಕೊಂಡು ಬರುವ) ಹೊರ ಸವಾರ, ರಾವುತ.
  2. (ಹಿಂದೆ ಬರುತ್ತಿರುವ ವ್ಯಕ್ತಿಗೆ ಯಾ ಕಾರಿಗೆ ದಾರಿ ಬಿಡಿಸುವ ಸಲುವಾಗಿ ಮುಂಚಿತವಾಗಿ ಮೋಟಾರು ಸೈಕಲ್‍ ಮೇಲೆ ಬರುವ) ಮುನ್‍ಸವಾರ; ಅಗ್ರಾರೋಹಿ.
  3. ಅಗ್ರಗಾಮಿ; ಮುಂದುಗಡೆ ಇದ್ದು ಹಿಂದುಗಡೆ ಇರುವವರನ್ನು ಮುಂದೊಯ್ಯುವವನು.
  4. (ಅಮೆರಿಕನ್‍ ಪ್ರಯೋಗ) (ಹೊರ) ಕಾವಲುಗಾರ ರಾವುತ; ಪಹರೆ ರಾವುತ; ಕುದುರೆ, ದನ, ಕುರಿ, ಮೊದಲಾದವುಗಳು ದೊಡ್ಡ ಮೈದಾನಗಳ ಹೊರವಲಯದಲ್ಲಿ ಅಡ್ಡಾಡುತ್ತಾ ಆ ಪ್ರಾಣಿಗಳು ಮೈದಾನದೊಳಗೇ ಇರುವಂತೆ ಕಾವಲು ಕಾಯುವ ಸವಾರ.