See also 2outreach
1outreach ಔಟ್‍ರೀಚ್‍
ಸಕರ್ಮಕ ಕ್ರಿಯಾಪದ
  1. (ಬೇರೊಂದರ ಎಟುಕು, ಶಕ್ತಿ, ಮೊದಲಾದವುಗಳನ್ನು) ಮೀರು: the demand has outreached the supply ಬೇಡಿಕೆಯು ಪೂರೈಕೆಯ ಸಾಮರ್ಥ್ಯವನ್ನು ಮೀರಿದೆ.
  2. (ಕಾವ್ಯಪ್ರಯೋಗ) (ಪ್ರಾಚೀನ ಪ್ರಯೋಗ) ಇನ್ನೂ ಮುಂದಕ್ಕೆ ಚಾಚು, ನೀಡು: outreach one’s hand as a token of friendship ಸ್ನೇಹದ ಕುರುಹಾಗಿ ಕೈಯನ್ನು ಮುಂದಕ್ಕೆ ಚಾಚು.
See also 1outreach
2outreach ಔಟ್‍ರೀಚ್‍
ನಾಮವಾಚಕ
  1. ಚಾಚುವಿಕೆ; ನೀಡುವಿಕೆ.
  2. ಚಾಚುದೂರ; ರಟ್ಟೆದೂರ; ಕೈಚಾಚಿನ ಪ್ರಮಾಣ; ಕೈಯಳವು; ಕೈಯಳತೆ: an outreach of 38 metres 38 ಮೀಟರುಗಳ ಚಾಚು ದೂರ.
  3. (ಮುಖ್ಯವಾಗಿ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ) ಯಾವುದೇ ಸಂಸ್ಥೆಯು ತೊಡಗಿರುವಿಕೆ ಯಾ ಅದರ ಪ್ರಭಾವ.