outrageous ಔಟ್‍ರೇಜಸ್‍
ಗುಣವಾಚಕ
  1. ತೀರ ಅನ್ಯಾಯದ; ಘಾತಕತನದ; ಅತಿ ದೌರ್ಜನ್ಯದ; ನ್ಯಾಯ ನೀತಿಯೇ ಇಲ್ಲದ: an outrageous slander ದೌರ್ಜನ್ಯದ ದೂಷಣೆ.
  2. ಅತ್ಯಾಚಾರದ; ಅನೈತಿಕ; ಅಧಾರ್ಮಿಕ; (ಧರ್ಮ, ಶಿಷ್ಟಾಚಾರ, ಮೊದಲಾದವುಗಳಿಗೆ) ಧಕ್ಕೆ ಉಂಟುಮಾಡುವ: outrageous treatment ಅತ್ಯಾಚಾರದ ನಡೆವಳಿಕೆ.
  3. ಮಿತಿಮೀರಿದ; ಅತಿರೇಕದ; ಎಲ್ಲೆಯೇ ಇಲ್ಲದ; ತಾಳಲಾಗದ: an outrageous price ಆಡ್ಡಾದಿಡ್ಡಿ ಬೆಲೆ; ಮಿತಿಮೀರಿದ, ತೆರಲಾರದ ಬೆಲೆ.
  4. (ಮನೋವೃತ್ತಿಯಲ್ಲಿ ಯಾ ಕಾರ್ಯದಲ್ಲಿ) ಕ್ರೋಧೋದ್ರಿಕ್ತ; ಉಗ್ರ; ಘೋರ; ರಾಕ್ಷಸೀಯ: an outrageous punishment ರಾಕ್ಷಸೀಯ ಶಿಕ್ಷೆ.
  5. ಲೋಕಾನುಭವಕ್ಕೆ, ಕಲ್ಪನೆಗಳಿಗೆ ಮೀರಿದ; ಲೋಕವಿಲಕ್ಷಣ: a child of the most outrageous precocity ಅತ್ಯಂತ ಲೋಕೋತ್ತರವಾದ ಪ್ರೌಢತೆಯುಳ್ಳ ಮಗು.