See also 2outrage
1outrage ಔಟ್‍ರೇಜ್‍
ನಾಮವಾಚಕ
  1. (ಬುದ್ಧಿಪೂರ್ವಕವಾಗಿ ಮಾಡಿದ) ಹಿಂಸಾಚಾರ; ಘಾತಕೃತ್ಯ; ಇತರರ ಹಕ್ಕುಗಳು, ಭಾವಗಳು, ಮೊದಲಾದವುಗಳಿಗೆ ತೀವ್ರ ಆಘಾತ ಯಾ ಹಾನಿ ಉಂಟುಮಾಡುವಿಕೆ.
  2. ಅತ್ಯಾಚಾರ; ಮನಸ್ಸಿಗೆ ತೀವ್ರ ಆಘಾತವನ್ನುಂಟುಮಾಡುವ ಕೃತ್ಯ: an outrage upon decency ಮರ್ಯಾದೆಗೆ ತೀವ್ರ ಆಘಾತ, ಪೆಟ್ಟು.
  3. (ಒಂದರ ಬಗ್ಗೆ) ತೀವ್ರ–ಕೋಪ, ಅಸಮಾಧಾನ, ವಿರೋಧ.
See also 1outrage
2outrage ಔಟ್‍ರೇಜ್‍
ಸಕರ್ಮಕ ಕ್ರಿಯಾಪದ
  1. ಅತ್ಯಾಚಾರ ನಡೆಸು; ಹಿಂಸಾಚಾರ, ಅಪಮಾನಗಳಿಗೆ ಗುರಿಪಡಿಸು.
  2. ಕ್ರೋಧ ಕೆರಳಿಸು: his attitude outrages me ಅವನ ಮನೋಭಾವ ನನ್ನ ಕ್ರೋಧವನ್ನು ಕೆರಳಿಸುತ್ತದೆ.
  3. (ಧರ್ಮ, ಶಿಷ್ಟಾಚಾರ, ಮೊದಲಾದವುಗಳಿಗೆ) ಧಕ್ಕೆ ಉಂಟುಮಾಡು; ಭಂಗತರು; ಆಘಾತ ಉಂಟುಮಾಡು: outrages our sense of decency ನಮ್ಮ ಶಿಷ್ಟಚಾರ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ.
  4. ಹೆಂಗಸನ್ನು ಕೆಡಿಸು; (ಹೆಂಗಸಿನ) ಶೀಲಭಂಗ ಮಾಡು; ಮಾನಭಂಗ ಮಾಡು.
  5. ತೀವ್ರ ಅಸಮಾಧಾನ, ವಿರೋಧ ಉಂಟು ಮಾಡು.