outpost ಔಟ್‍ಪೋಸ್ಟ್‍
ನಾಮವಾಚಕ
  1. (ಶತ್ರುವಿನ ಅನಿರೀಕ್ಷಿತ ದಾಳಿಯಿಂದ ರಕ್ಷಿಸುವ ಸಲುವಾಗಿ ಪ್ರಧಾನ ಸೇನಾವ್ಯೂಹದಿಂದ ದೂರದಲ್ಲಿ ಸ್ಥಾಪಿಸಿರುವ) ಹೊರ ಠಾಣೆ; ಹೊರ ಪಾಳೆಯ; ಹೊರ ಶಿಬಿರ; ಬಾಹ್ಯ ರಕ್ಷಣಾ ಸ್ಥಾನ: our mountain outposts ಪರ್ವತಗಳ ಮೇಲಿರುವ ನಮ್ಮ ಹೊರಠಾಣೆಗಳು.
  2. ಹೊರ ಠಾಣೆಯಲ್ಲಿಟ್ಟಿರುವ ಸೇನಾದಳ; ಹೊರಪಡೆ.
  3. ದೂರದ ಶಾಖೆ ಯಾ ವಸಾಹತು.
  4. (ಮುಖ್ಯವಾಗಿ ಬ್ರಿಟಿಷ್‍) ಚಕ್ರಾಧಿಪತ್ಯದ ಅತ್ಯಂತ ದೂರದಲ್ಲಿರುವ ನಾಡು.