outlook ಔಟ್‍ಲುಕ್‍
ನಾಮವಾಚಕ
  1. (ಒಂದು ಸ್ಥಳದಿಂದ ಕಾಣುವ) ಬಾಹ್ಯದೃಶ್ಯ; ಹೊರನೋಟ.
  2. (ಮನೋ-)ದೃಷ್ಟಿ; ದೃಷ್ಟಿಕೋನ: narrow outlook ಸಂಕುಚಿತ ದೃಷ್ಟಿ. one’s outlook on life ಒಬ್ಬನ ಜೀವನ ದೃಷ್ಟಿ.
  3. (ರೂಪಕವಾಗಿ) ಭವಿಷ್ಯ; ಭವಿಷ್ಯದ ನಿರೀಕ್ಷೆ: the political outlook (ಒಬ್ಬನು ಕಾಣುವಂತೆ) ರಾಜಕೀಯ ಭವಿಷ್ಯ.
  4. (ಸುತ್ತಲ ನೋಟವನ್ನು ನಿಂತು ನೋಡುವ) ನೆಲೆ; ನಿಟ್ಟು.
  5. ನೋಡುವಿಕೆ; ನೋಟ.
  6. (ಎಚ್ಚರದಿಂದ ಮಾಡುವ) ಕಾವಲು: a careful outlook to prevent fires ಬೆಂಕಿಗಳನ್ನು ತಪ್ಪಿಸಲು ಜಾಗರೂಕವಾದ ಕಾವಲು.