See also 2outline
1outline ಔಟ್‍ಲೈನ್‍
ನಾಮವಾಚಕ
  1. (ಬಹುವಚನದಲ್ಲಿ ಸಹ) (ಯಾವುದೇ ವಸ್ತುವಿನ ಆಕಾರವನ್ನು ನಿರ್ದೇಶಿಸುವ) ರೂಪರೇಖೆ; ಬಾಹ್ಯರೇಖೆ; ಹೊರರೇಖೆ.
  2. (ಬೆಳಕು ನೆಳಲುಗಳನ್ನು ಯಾ ಛಾಯೆಗಳನ್ನು ತೋರಿಸದೆ ಆಕಾರವನ್ನು ಮಾತ್ರ ತೋರಿಸುವ) ಆಕೃತಿ ರೇಖೆ (ಚಿತ್ರ); ರೇಖಾಕೃತಿ.
  3. (ವಿಷಯದ) ರೂಪರೇಖೆ; ಸ್ಥೂಲಚಿತ್ರ: an outline of history ಇತಿಹಾಸದ ರೂಪರೇಖೆ.
  4. ಪದಾಕೃತಿ; ಶಬ್ದಾಕೃತಿ; ಶೀಘ್ರಲಿಪಿಯಲ್ಲಿ ಪದವನ್ನು ಪ್ರತಿನಿಧಿಸುವ ಗೆರೆರೂಪ, ರೇಖಾಕೃತಿ.
  5. (ವಿಷಯದ) ಕರಡು; ಗೋಷ್ವಾರೆ.
  6. (ಮುಖ್ಯ ಅಂಶಗಳ) ಸಾರಾಂಶ; ಸಂಗ್ರಹ ನಿರೂಪಣೆ.
  7. (ಬಹುವಚನದಲ್ಲಿ) ಸಾರಭೂತವಾದ ಅಂಶಗಳು; ಮುಖ್ಯಾಂಶಗಳು; ಸ್ಥೂಲಾಂಶಗಳು; ರೂಪರೇಖೆಗಳು: outlines of the project ಯೋಜನೆಯ ಸ್ಥೂಲಾಂಶಗಳು.
  8. (ಮುದ್ರಣ) (ಒಳಗೆ ಖಾಲಿ ಇದ್ದು ಹೊರರೇಖೆಯನ್ನು ಮಾತ್ರ ಅಚ್ಚು ಮಾಡುವ, ಅಲಂಕಾರದ) ರೇಖಾಕೃತಿಯ ಅಚ್ಚು.
  9. (ಏಕವಚನ ಯಾ ಬಹುವಚನದಲ್ಲಿ)
    1. ವಸ್ತುವೊಂದನ್ನು ಒಳಗೊಳ್ಳುವ ಯಾ ಸೂಚಿಸುವ ರೇಖೆ(ಗಳು): the outline of a shape under the blanket ಕಂಬಳಿಯಡಿಯ ವಸ್ತುವೊಂದರ ಆಕೃತಿರೇಖೆ.
    2. (ಯಾವುದರದೇ) ಎಲ್ಲೆ; ಗಡಿ; ಸೀಮಾರೇಖೆ.
ಪದಗುಚ್ಛ

in outline ರೇಖಾಕೃತಿಯಲ್ಲಿ; ರೇಖಾರೂಪದಲ್ಲಿ; ಕೇವಲ ಆಕೃತಿ ರೇಖೆಯಲ್ಲಿ ಚಿತ್ರಿಸಿದ.

See also 1outline
2outline ಔಟ್‍ಲೇನ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಸ್ತುವಿನ) ರೂಪರೇಖೆಯನ್ನು ಬರೆ; ಆಕೃತಿ ಚಿತ್ರಿಸು.
  2. (ಯಾವುದೇ ವಿಷಯದ) ರೂಪರೇಖೆಗಳನ್ನು ವಿವರಿಸು; ಸ್ಥೂಲವಿವರಣೆ ನೀಡು: the professor outlined the course ಪ್ರಾಧ್ಯಾಪಕ ಪಠ್ಯವಿಷಯ ಹಾಗೂ ಕ್ರಮದ ರೂಪರೇಖೆಗಳನ್ನು ವಿವರಿಸಿದರು.
  3. (ಅಲಂಕಾರ ಮಾಡುವುದು ಮೊದಲಾದವುಗಳಲ್ಲಿ) ಬಾಹ್ಯಾಕೃತಿ, ಹೊರರೇಖೆ ಗುರುತು ಮಾಡು.