outlet ಔಟ್‍ಲೆ(ಲಿ)ಟ್‍
ನಾಮವಾಚಕ
  1. (ಯಾವುದೇ ವಸ್ತು ಹೊರಕ್ಕೆ ಹೋಗುವ) ಹೊರಗಂಡಿ; ತೂತು; ಹೊರದಾರಿ; ಬಹಿರ್ದ್ವಾರ.
  2. (ವಾಣಿಜ್ಯ) ಸರಕುಗಳಿಗೆ ಅಗತ್ಯವಾದ ಮಾರುಕಟ್ಟೆ.
  3. (ಒಟ್ಟು ವ್ಯಾಪಾರಿಯ, ಸರಕುಗಳನ್ನು ಚಿಲ್ಲರೆಯಾಗಿ ಮಾರುವ) ಚಿಲ್ಲರೆ ವ್ಯಾಪಾರಿ, ಅಂಗಡಿ ಯಾ ಏಜೆಂಟು.
  4. (ರೂಪಕವಾಗಿ) (ಮನಸ್ಸಿನ ವಿಚಾರ ಯಾ ಭಾವ ಯಾ ಹೃದಯದ ಹಂಬಲಕ್ಕೆ) ಅಭಿವ್ಯಕ್ತಿ–ಮಾರ್ಗ, ದ್ವಾರ, ಸಾಧನ: an outlet for tension (ಮನಸ್ಸಿನ) ಉದ್ವೇಗಕ್ಕೆ ಅಭಿವ್ಯಕ್ತಿ ಮಾರ್ಗ.
  5. (ಹೊಳೆ, ತೊರೆ, ಮೊದಲಾದವುಗಳ) ಹೊರ ಹರಿವಿನ ದಾರಿ; ಬಾಯಿ; ಮುಖ.
  6. (ಅಮೆರಿಕನ್‍ ಪ್ರಯೋಗ) ವಿದ್ಯುತ್ಸಂಪರ್ಕ (ಪಡೆಯಬಹುದಾದ) ಸ್ಥಾನ, ಬಿಂದು.