outgrowth ಔಟ್‍ಗ್ರೋತ್‍
ನಾಮವಾಚಕ
  1. ಸಹಜವಾದ, ಸ್ವಭಾವಜನ್ಯವಾದ–ಬೆಳವಣಿಗೆ ಯಾ ಹಾಗೆ ಬೆಳೆದದ್ದು.
  2. ಒಂದರ ಶಾಖೆ; ಒಂದರಿಂದ ಸ್ವಾಭಾವಿಕವಾಗಿ ಹೊರಹೊರಟದ್ದು ಯಾ ಜನ್ಯವಾದದ್ದು.
  3. ಸಹಜ–ಫಲಿತಾಂಶ, ಪರಿಣಾಮ, ಫಲ: juvenile delinquency is often the outgrowth of parental neglect ಬಾಲಾಪರಾಧ ಹಲವೊಮ್ಮೆ ತಾಯಿತಂದೆಗಳ ಉಪೇಕ್ಷೆಯ ಸಹಜ ಫಲ.
  4. ಅತಿ ಬೆಳವಣಿಗೆ; ಅತಿವೃದ್ಧಿ; ಅತಿಯಾಗಿ ಬೆಳೆದುಕೊಳ್ಳುವುದು: pruning is meant to check the outgrowth of plants ಗಿಡಗಳು ಅತಿಯಾಗಿ ಬೆಳೆಯುವುದನ್ನು ತಡೆಯಲೆಂದೇ ಗಿಡಗಳ ಕುಡಿಯನ್ನು ಕತ್ತರಿಸುವುದು.
  5. (ದೇಹ ರಚನೆಗೆ ಯಾ ಕ್ರಿಯೆಗೆ ಬೇಡದ) ಬಾಹ್ಯವೃದ್ಧಿ; ಹೊರಬೆಳವಣಿಗೆ (ಗಂಟು, ಗಡ್ಡೆ, ಮೊದಲಾದವು).