See also 2outgo
1outgo ಔಟ್‍ಗೋ
ಸಕರ್ಮಕ ಕ್ರಿಯಾಪದ
(ವರ್ತಮಾನ ಕಾಲ ಪ್ರಥಮ ಪುರುಷ ಏಕವಚನ outgoes; ಭೂತರೂಪ
  1. (ಪ್ರಾಚೀನ ಪ್ರಯೋಗ) (ಬೇರೊಬ್ಬರಿಗಿಂತ) ಮುಂದೆ ಹೋಗು ಯಾ ವೇಗವಾಗಿ ಹೋಗು; ಮುಂದುವರಿ; ಮುಂದೆ ಸಾಗು.
  2. (ಬೇರೊಬ್ಬರನ್ನು) ಮೀರಿಸು; (ಬೇರೊಬ್ಬರಿಗಿಂತ) ಮಿಗಿಲಾಗು; ಕೈ ಮೇಲಾಗು; ಮೇಲ್ಗೈಯಾಗು; ಅತಿಶಯವಾಗು: to outgo one’s fellows ಸಮಾನಸ್ಕಂಧರನ್ನು ಮೀರಿಸು.
See also 1outgo
2outgo ಔಟ್‍ಗೋ
ನಾಮವಾಚಕ
(ಬಹುವಚನ outgoes).
  1. ಹೊರಹೊಮ್ಮಿಕೆ; ಹೃದಯದಿಂದ (ಭಾವಗಳು) ಹೊರಸೂಸುವುದು: her illness occasioned a tremendous outgo of affectionate concern ಆಕೆಯ ಕಾಯಿಲೆ ಅಪಾರವಾದ ಒಲವಿನ ಕಳಕಳಿಯ ಹೊರಹೊಮ್ಮಿಕೆಗೆ ಕಾರಣವಾಯಿತು; ಆಕೆಯ ಕಾಯಿಲೆ (ಆಪ್ತರ ಹೃದಯದಿಂದ) ಅಪಾರವಾದ ಒಲವಿನ ಕಳಕಳಿಯನ್ನು ಹೊರಹೊಮ್ಮಿಸಿತು.
  2. (ಕೈಬಿಟ್ಟು) ಹೊರಗೆ ಹೋದ ಹಣ; (ಹೊರಗೆ) ಹೋದದ್ದು; ಖರ್ಚು; ವ್ಯಯ; ವೆಚ್ಚ: a record of income and outgo ಆಯವ್ಯಯದ ದಾಖಲೆ.
  3. (ಪ್ರಾಚೀನ ಪ್ರಯೋಗ) (ಬೇರೊಬ್ಬರಿಗಿಂತ) ಮುಂದೆ ಹೋಗುವುದು; ಮುಂದೆ ಸಾಗುವುದು; ಮುಂಬರಿಯುವುದು.