See also 2outfit
1outfit ಔಟ್‍ಹಿಟ್‍
ನಾಮವಾಚಕ
  1. ಸಜ್ಜು; ವ್ಯಕ್ತಿಯನ್ನು ಸನ್ನದ್ಧಗೊಳಿಸಲು ಒದಗಿಸಿಕೊಡುವ ಸಾಮಗ್ರಿ, ವಸ್ತುಗಳ ಸಮುದಾಯ: a mountaineer’s outfit ಪರ್ವತಾರೋಹಿಯ ಸಜ್ಜು.
  2. (ಮುಖ್ಯವಾಗಿ ಹೆಂಗಸಿನ) ಸಜ್ಜುಗಜ್ಜು; ಬಟ್ಟೆ ಬರೆ, ಉಡುಗೆ ತೊಡುಗೆ ಮತ್ತು ಅದಕ್ಕೆ ಹೊಂದುವ ಒಡವೆಗಳು, ಮೊದಲಾದವು.
  3. ಯಾವುದೇ ಕಾರ್ಯ ಯಾ ಉದ್ದೇಶಕ್ಕಾಗಿ ಬೇಕಾದ ಸಾಮಗ್ರಿ, ವಸ್ತುಗಳ ಸಮೂಹ; ಸಜ್ಜು: a cooking outfit ಅಡುಗೆಯ ಸಜ್ಜು, ಸಾಮಗ್ರಿ.
  4. (ಆಡುಮಾತು) ಯಾವುದೇ ಸಂಸ್ಥೆಯಾಗಿ ಪರಿಗಣಿತವಾದ ಯಾ ನಿರ್ದಿಷ್ಟವಾದ ಯಾವುದೇ ಉದ್ಯಮದಲ್ಲಿ ತೊಡಗಿರುವ ಜನರ–ತಂಡ, ಗುಂಪು, ಸಮೂಹ, ಸಿಬ್ಬಂದಿ: construction outfit ಕಟ್ಟಡ ಕೆಲಸದ ಸಿಬ್ಬಂದಿ.
  5. (ಪ್ರಯಾಣ, ನೌಕಾ ಸಂಚಾರ, ಮೊದಲಾದ ಕಾರ್ಯಕ್ಕಾಗಿ ಮಾಡಿಕೊಂಡ) ಸಜ್ಜುಗಜ್ಜು; ಏರ್ಪಾಡು; ವ್ಯವಸ್ಥೆ.
  6. (ಮಾನಸಿಕ, ದೈಹಿಕ ಯಾ ನೈತಿಕ) ಸಿದ್ಧತೆ; ಸನ್ನಾಹ; ಸಜ್ಜು.
See also 1outfit
2outfit ಔಟ್‍ಹಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outfitted; ವರ್ತಮಾನ ಕೃದಂತ outfitting).

ಸಜ್ಜುಗೊಳಿಸು; ಸನ್ನದ್ಧಗೊಳಿಸು; (ವ್ಯಕ್ತಿ, ನೌಕೆ, ಮೊದಲಾದವನ್ನು ಯಾವುದೇ ಉದ್ದೇಶಕ್ಕಾಗಿ ಬೇಕಾದ ವಸ್ತುಗಳನ್ನೆಲ್ಲ, ಮುಖ್ಯವಾಗಿ ಬಟ್ಟೆಬರೆಗಳನ್ನು, ಒದಗಿಸಿ) ಸಿದ್ದಗೊಳಿಸು: outfit the expedition of mountaineers ಪರ್ವತಾರೋಹಿ ದಳವನ್ನು ಅವರ ಯಾತ್ರೆಗಾಗಿ ಸಜ್ಜುಗೊಳಿಸು.