See also 2outer
1outer ಔಟರ್‍
ಗುಣವಾಚಕ
  1. ಹೊರ(ಗಡೆಯ); ಹೊರಗಡೆಯಿರುವ; ಬಾಹ್ಯ: outer garments ಹೊರ ಉಡುಪು. outer corridor ಹೊರಗಡೆಯ ಪಡಸಾಲೆ.
  2. ಬಹಿರಂಗದ; ಬಾಹ್ಯ; (ವ್ಯಕ್ತಿ ನಿಷ್ಠವಾಗಿರದೆ) ವಸ್ತುನಿಷ್ಠವಾದ; ವಾಸ್ತವಿಕ ಯಾ ಭೌತ: outer reality ಬಾಹ್ಯ ಸತ್ಯ; ಹೊರ ಸತ್ಯ; ವಾಸ್ತವಿಕ ಸತ್ಯ; ವ್ಯಕ್ತಿಯನ್ನು ಅವಲಂಬಿಸಿರದ ಸತ್ಯ, ವಸ್ತು ಸಂಗತಿ.
  3. ಕೇಂದ್ರದಿಂದ ಯಾ ಒಳಗಿನಿಂದ ದೂರವಿರುವ; ಸಾಕಷ್ಟು ದೂರದಲ್ಲಿರುವ.
ಪದಗುಚ್ಛ
  1. the outer $^1$bar.
  2. the outer man (woman) ವ್ಯಕ್ತಿಯ–ಬಾಹ್ಯರೂಪ; ಹೊರ–ರೂಪ, ವೇಷ.
  3. the outer world ಹೆರವರು; ಅನ್ಯರು; ಇತರರು; ತನ್ನ ಪರಿವಾರ, ವೃತ್ತಗಳಿಗೆ ಸೇರದಿರುವ ಜನ.
See also 1outer
2outer ಔಟ್‍ರ್‍
ನಾಮವಾಚಕ
  1. (ಬಂದೂಕಿನ ಗುರಿ ಹಲಗೆಯಲ್ಲಿ ಗುರಿಗಣ್ಣಿನ ಸುತ್ತಲಿನ ವೃತ್ತಗಳ) ಹೊರಪ್ರದೇಶ.
  2. ಹೊರ ಹೊಡೆತ; (ಗುರಿ ಹಲಗೆಯ) ಹೊರ ಪ್ರದೇಶಕ್ಕೆ ಹೊಡೆದ ಏಟು.
  3. ಹೊರ ಉಡುಪು ಯಾ ಅದರ ಭಾಗ.
  4. (ಆಸ್ಟ್ರೇಲಿಯ, ಅಶಿಷ್ಟ) ಆವರಣದ ಹೊರಗಿರುವ ರೇಸ್‍ಕೋರ್ಸಿನ ಭಾಗ.
  5. ಸಾಗಣೆಗೆ ಯಾ ಪ್ರದರ್ಶನಕ್ಕೆ ಬಳಸುವ ಹೊರಗಿನ ಧಾರಕ, ಪಾತ್ರೆ, ಮೊದಲಾದವು.