See also 2outcrop
1outcrop ಔಟ್‍ಕ್ರಾಪ್‍
ನಾಮವಾಚಕ
  1. ಹೊರ ಬೆಳವಣಿಗೆ; ಬಹಿಸ್ಸರಣ; ಹೊರಚಾಚು; ಬಹಿರ್ಗತ (ಶಿಲಾ) ಸ್ತರ; ನೆಲದಿಂದ ಮೇಲೆದ್ದ ಯಾ ತಲೆ ಎತ್ತಿದ ಕಲ್ಲುಪದರ; ಭೂಗರ್ಭದಿಂದ ಮೇಲೆದ್ದು ಹೊರಗೆ ಕಾಣಿಸಿಕೊಳ್ಳುವ ಶಿಲೆ ಯಾ ಶಿಲಾ ಸ್ತರ.
  2. (ರೂಪಕವಾಗಿ) (ಇದ್ದಕ್ಕಿದ್ದಂತೆ ಉಂಟಾಗುವ ಹಿಂಸಾಚಾರದಿಂದ ಕೂಡಿದ) ಗಮನಾರ್ಹವಾದ ಪ್ರದರ್ಶನ, ಘಟನೆ, ಆಂದೋಳನ, ಬಂಡಾಯ, ಮೊದಲಾದವು: an outcrop of student demonstrations ವಿದ್ಯಾರ್ಥಿ ಪ್ರದರ್ಶನಗಳ ಹಠಾತ್‍ ಪ್ರದರ್ಶನ.
See also 1outcrop
2outcrop ಔಟ್‍ಕ್ರಾಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outcropped, ವರ್ತಮಾನ ಕೃದಂತ outcropping).

(ಶಿಲೆ, ಶಿಲಾಸ್ತರ, ಶಿಲಾರೇಖೆಯ ವಿಷಯದಲ್ಲಿ ಭೂಗರ್ಭದಿಂದ ಮೇಲಕ್ಕೆದ್ದು ಭೂಮಿಯ ಮೇಲ್ಮೈ ಮೇಲೆ) ಹೊರಚಾಚು; ಬಹಿರ್ಗಮಿಸು; ಹೊರಗೆ ಕಾಣಿಸಿಕೊ.