outbreed ಔಟ್‍ಬ್ರೀಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outbred).
  1. ಅನ್ಯ ಕುಲದಲ್ಲಿ ಸಂತಾನ ಹುಟ್ಟಿಸು.
  2. (ಸಸ್ಯದ, ಪ್ರಾಣಿಯ ವಿಷಯದಲ್ಲಿ) ಅನ್ಯ ಜಾತಿಯಲ್ಲಿ ಫಲೋತ್ಪತ್ತಿ ಮಾಡು.
  3. (ಇತರರಿಗಿಂತ, ಬೇರೆ ಪ್ರಾಣಿಗಳಿಗಿಂತ) ವೇಗವಾಗಿ ಯಾ ವಿಪುಲವಾಗಿ ಸಂತಾನೋತ್ಪತ್ತಿ ಮಾಡು: pests sometimes outbreed their hosts ಕೆಲವೊಮ್ಮೆ ಸಸ್ಯ ಯಾ ಪ್ರಾಣಿ ಪೀಡಕಗಳು ತಮ್ಮ ಪೋಷಕಗಳಿಗಿಂತ ವೇಗವಾಗಿಯೂ ವಿಪುಲವಾಗಿಯೂ ಸಂತಾನೋತ್ಪತ್ತಿ ಮಾಡುತ್ತವೆ.
  4. (ವಿಜಾತೀಯ ಸಸ್ಯದೊಡನೆ ಯಾ ಪ್ರಾಣಿಯೊಡನೆ ಬೆರೆಸಿ) ಬೇಡದ ಲಕ್ಷಣವನ್ನು ಕಳೆ: outbreed horns (ವಿಜಾತೀಯ ಪ್ರಾಣಿಯೊಡನೆ ಬೆರೆಸಿ) ಕೊಂಬುಗಳನ್ನು ಕಳೆ; ಕೊಂಬಿಲ್ಲದಂತೆ ಮಾಡು.