outbid ಔಟ್‍ಬಿಡ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ outbidding; ಭೂತರೂಪ ಮತ್ತು ಭೂತಕೃದಂತ ಅದೇ).
  1. (ಹರಾಜಿನಲ್ಲಿ) ಸವಾಲೇರಿಸು; ಛಡಸವಾಲು ಮಾಡು; ಏಲಮಿನಲ್ಲಿ ದರ ಏರಿಸು; (ಇತರರಿಗಿಂತ) ಹೆಚ್ಚು ದರ ಕೂಗು: he outbid all the rest and knocked down the painting ಅವನು ಇತರರೆಲ್ಲರಿಗಿಂತ ಹೆಚ್ಚು ಸವಾಲು ಕೂಗಿ ಆ ಚಿತ್ರವನ್ನು ಹೊಡೆದುಬಿಟ್ಟ.
  2. (ಉತ್ಪ್ರೆಕ್ಷೆಯಲ್ಲಿ ಯಾ ಕಟ್ಟುಕಥೆ ಹೇಳುವುದು ಮೊದಲಾದವುಗಳಲ್ಲಿ) ಇತರರನ್ನು ಮೀರಿಸು.
  3. ಹೆಚ್ಚು ಕೊಡಲೊಪ್ಪು.