out-think ಔಟ್‍ತಿಂಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ out-thought).
  1. (ಬೇರೊಬ್ಬನಿಗಿಂತ) ಉತ್ತಮವಾಗಿ ಯಾ ಹೆಚ್ಚು ಸೂಕ್ಷ್ಮವಾಗಿ ಯಾ ಕರಾರುವಾಕ್ಕಾಗಿ ಆಲೋಚಿಸು: he out-thinks most of his contemporaries in the field of education ಶಿಕ್ಷಣ ಕ್ಷೇತ್ರದಲ್ಲಿ ಆತ ತನ್ನ ಸಮಕಾಲೀನರಲ್ಲಿ ಬಹುಪಾಲು ಜನಕ್ಕಿಂತ ಹೆಚ್ಚು ಕರಾರುವಾಕ್ಕಾಗಿ ಆಲೋಚಿಸುತ್ತಾನೆ.
  2. (ಎದುರಾಳಿಯನ್ನು) ಆಲೋಚನೆಯಲ್ಲಿ ಮೀರಿಸು, ಸೋಲಿಸು; (ಎದುರಾಳಿಗಿಂತ) ಹೆಚ್ಚು ಚುರುಕಾಗಿ ಆಲೋಚಿಸು: he has only a split second to out-think his opponent ಆಲೋಚನೆಯಲ್ಲಿ ಎದುರಾಳಿಯನ್ನು ಸೋಲಿಸಲು ಅವನಿಗೆ ಕ್ಷಣಾಂಶ ಮಾತ್ರ ಇದೆ.