out- ಔಟ್‍-
ಪೂರ್ವಪ್ರತ್ಯಯ

ಕ್ರಿಯಾವಿಶೇಷಣವಾಗಿ ಯಾ ಗುಣವಾಚಕವಾಗಿ ಯಾ ಉಪಸರ್ಗವಾಗಿ ಕ್ರಿಯಾಪದಗಳಿಗೋ ನಾಮಪದಗಳಿಗೋ ಸೇರಿಸುವ, ಕೆಳಗಿನ ಅರ್ಥ ಕೊಡುವ ಪೂರ್ವಪ್ರತ್ಯಯ.

  1. ಯಾವುದೇ ಕ್ರಿಯಾಪದದ ಹಿಂದೆ ಸೇರಿ ಆ ಕ್ರಿಯಾಪದದ ಮುಂದೆ ಸೇರಿದ್ದರೆ ಬರುವ ಅರ್ಥವನ್ನೇ ಕೊಡುವಲ್ಲಿ ಬಳಕೆ: outblaze, outspread.
  2. ಕ್ರಿಯಾಪದಗಳ ಹಿಂದೆ ಸೇರಿ ಹಲವೊಮ್ಮೆ ಕೃದ್ಚಾಚಿಗಳನ್ನೋ (ವರ್ತಮಾನ ಕೃದಂತ ಯಾ ಭೂತಕೃದಂತಗಳನ್ನೋ) ಕೃನ್ನಾಮಗಳನ್ನೋ ರೂಪಿಸುವ, ಹಲವೊಮ್ಮೆ ವಿಶೇಷಾರ್ಥ ಕೊಡುವಲ್ಲಿ ಬಳಕೆ: outcast, outstanding.
  3. ಕ್ರಿಯಾಪದಗಳ ಧಾತುರೂಪಗಳಿಗೋ ಅವುಗಳಿಂದ ನಿಷ್ಪನ್ನವಾದ ಕೃನ್ನಾಮಗಳಿಗೋ ಹಿಂದೆ ಸೇರಿ ಹಲವೊಮ್ಮೆ ವಿಶೇಷಾರ್ಥವುಳ್ಳ ನಾಮಪದಗಳಾಗುವಲ್ಲಿ ಬಳಕೆ: outbreak, outburst.
  4. ಕ್ರಿಯಾಪದದ ಹಿಂದೆ ಸೇರಿ ಕ್ರಿಯಾಪದ ಹೇಳುವ ಕ್ರಿಯೆಯನ್ನು ಮಾಡುವಂಥದು ಎಂಬ ಅರ್ಥವನ್ನು ಕೊಡುವ ಪೂರ್ವಪ್ರತ್ಯಯ: outcrop, outgrowth.
  5. ಧಾತುವಿನ ಹಿಂದೆ ಸೇರಿ ಮಾಡಿದ ಕಾರ್ಯ ಎಂಬ ಅರ್ಥ ಕೊಡುವ ಪೂರ್ವಪ್ರತ್ಯಯ: outcry, outlook.
  6. ಧಾತುವಿನ ಹಿಂದೆ ಸೇರಿ ಕ್ರಿಯೆ ಯಾ ಘಟನೆ ಸಂಭವಿಸುವ ಕಾಲ ಯಾ ಜಾಗವನ್ನು ಸೂಚಿಸುವ ಪದಗಳಲ್ಲಿ ಬಳಕೆ: outlet, outset.
  7. ನಾಮಪದಗಳ ಹಿಂದೆ ಸೇರಿ ಗುಣವಾಚಕಕ್ಕೆ ಪರ್ಯಾಯವಾಗಿ ಬಳಕೆ:
    1. ಹೊರ, ಹೊರಗಿನ, ಬಾಹ್ಯ ಎಂಬ ಅರ್ಥದಲ್ಲಿ: outline, outside.
    2. ಸಂಬಂಧಿವಿದ್ದರೂ ಪ್ರತ್ಯೇಕವಾಗಿರುವ, ಅಧೀನವಾಗಿದ್ದೂ ಪ್ರತ್ಯೇಕವಾಗಿರುವ, ನಡುಭಾಗದಲ್ಲಿಲ್ಲದ, ಸ್ವಲ್ಪ ಆಚೆ ಯಾ ದೂರದಲ್ಲಿ ಇರುವ ಎಂಬ ಅರ್ಥಗಳಲ್ಲಿ: outhouse, outpost.
  8. (ನಾಮವಾಚಕಗಳ ಹಿಂದೆ ಸೇರಿ) ಹೊರಗೆ, ಹೊರಕ್ಕೆ, ಬಹಿರ್‍ ಎಂಬ ಅರ್ಥದ ಕ್ರಿಯಾವಿಶೇಷಣ ಮತ್ತು ಗುಣವಾಚಕಗಳನ್ನು ರೂಪಿಸುವಲ್ಲಿ ಬಳಕೆ: outdoors, outlaw.
  9. ಸಾಮಾನ್ಯವಾಗಿ ಮೀರಿದ, ಮಿಗಿಲಾದ, ಅಧಿಕ ಎಂಬರ್ಥದಲ್ಲಿ:
    1. ಯಶಸ್ವಿಯಾಗಿ ಯಾ ಹೆಚ್ಚಿನ ಮಟ್ಟದಲ್ಲಿ ಕಾರ್ಯಮಾಡುವ ಎಂಬರ್ಥ ನೀಡಲು ಕ್ರಿಯಾಪದಕ್ಕೆ ಸೇರಿಸುವ ಪೂರ್ವಪ್ರತ್ಯಯ : outface, outfight.
    2. ಹೆಚ್ಚಿನ, ಉತ್ತಮವಾದ ಯಾ ದೀರ್ಘತರವಾದ ಕ್ರಿಯೆಯಿಂದ ಮೀರಿಸಲ್ಪಟ್ಟ ಯಾ ಸೋಲಿಸಲ್ಪಟ್ಟ ವ್ಯಕ್ತಿ ಯಾ ವಿಷಯವನ್ನು ಕರ್ಮಪದವಾಗುಳ್ಳ ಸಕರ್ಮಕ ಕ್ರಿಯಾಪದಗಳನ್ನು ರಚಿಸಲು ಕ್ರಿಯಾಪದಗಳಿಗೆ ಯಾ ನಾಮಪದಗಳಿಗೆ ಸೇರಿಸುವ ಪೂರ್ವಪ್ರತ್ಯಯ: outvote, outrun, outgeneral, outgrow, outlive, outstay.
    3. ನಾಮಪದಕ್ಕೆ, ವಿರಳವಾಗಿ ಗುಣವಾಚಕಕ್ಕೆ, ಹಿಂದೆ ಸೇರಿ ಯಾವುದೇ ಒಂದು ಅಂಶದಲ್ಲಿ ಮೀರಿಸು ಎಂಬ ಅರ್ಥದ ಕ್ರಿಯಾಪದವನ್ನು ರೂಪಿಸುವ ಪೂರ್ವಪ್ರತ್ಯಯ: outclass, outnumber, outwit.
    4. ಯಾವುದೇ ಗುಣಕ್ಕೆ ಹೆಸರಾದ ವ್ಯಕ್ತಿಯ ಹೆಸರಿಗೆ ಸೇರಿ ಆ ವ್ಯಕ್ತಿಯನ್ನು ಮೀರಿಸು ಎಂಬ ಅರ್ಥದ ಕ್ರಿಯಾಪದವನ್ನು ರೂಪಿಸುವ ಪೂರ್ವಪ್ರತ್ಯಯ : out-herod Herod, out-zola Zola.