oust ಔಸ್ಟ್‍
ಸಕರ್ಮಕ ಕ್ರಿಯಾಪದ
  1. ಸ್ಥಾನಭ್ರಷ್ಟ ಮಾಡು; ಇರುವ ಸ್ಥಳದಿಂದ ಹೊರಡಿಸು; ಹೊರಗಟ್ಟು; ಹೊರದೂಡು; ಉಚ್ಚಾಟನೆ ಮಾಡು; ಪದಚ್ಯುತಿಗೊಳಿಸು; ಓಡಿಸಿಬಿಡು; ಒದ್ದೋಡಿಸು.
  2. (ನ್ಯಾಯಶಾಸ್ತ್ರ) (ಒಬ್ಬನ) ಸ್ವಾಮ್ಯ, ಅನುಭೋಗ ತಪ್ಪಿಸು; (ಒಬ್ಬನಿಗೆ) ಸೇರಿದ್ದನ್ನು ಕಿತ್ತುಕೊ.
  3. (ಒಂದರ ಸ್ಥಾನವನ್ನು ಇನ್ನೊಂದು) ಬಲಾತ್ಕಾರದಿಂದ ಆಕ್ರಮಿಸಿಕೊ; (ಇನ್ನೊಂದನ್ನು) ಇಲ್ಲದಂತೆ ಮಾಡು: colour slides virtually ousted black and white ಬಣ್ಣದ ಸ್ಲೈಡುಗಳು ಬಂದ ಮೇಲೆ ಕಪ್ಪು ಬಿಳುಪಿನವು ಹೆಚ್ಚು ಕಡಿಮೆ ಇಲ್ಲದಂತಾಗಿವೆ.