ourselves ಔವರ್‍ಸೆಲ್‍ವ್ಸ್‍
ಸರ್ವನಾಮ

(ಬಹುವಚನ)

  1. (ಒತ್ತಿ ಹೇಳುವಲ್ಲಿ, we ಎಂಬುದರ ಬಹುವಚನ ರೂಪಕವಾಗಿ) ನಾವೇ; ನಾವು: we ourselves will see to it ನಾವೇ ಸ್ವತಃ ಅದನ್ನು ನಿರ್ವಹಿಸುತ್ತೇವೆ.
  2. (ಆತ್ಮಾರ್ಥಕ, ದ್ವಿತೀಯಾ ವಿಭಕ್ತಿಯಲ್ಲಿ ಯಾವಾಗಲೂ ಬಹುವಚನದಲ್ಲಿ ಪ್ರಯೋಗ) ನಾವು: we shall do harm to ourselves ನಾವು ನಮಗೇ ತೊಂದರೆ ಮಾಡಿಕೊಳ್ಳುತ್ತೇವೆ.
  3. ನಮ್ಮ ಸಹಜ ಸ್ಥಿತಿಯಲ್ಲಿ; ನಮ್ಮ ಎಂದಿನ ದೈಹಿಕ ಯಾ ಮಾನಸಿಕ ಸ್ಥಿತಿಯಲ್ಲಿ: not quite ourselves today ಇಂದು ನಾವು ಎಂದಿನಂತಿಲ್ಲ, ನಮ್ಮ ಸಹಜ ಸ್ಥಿತಿಯಲ್ಲಿಲ್ಲ.
ಪದಗುಚ್ಛ
  1. be ourselves ನಮ್ಮ ಸಹಜ ರೀತಿಯಲ್ಲಿ, ಯಾವ ನಿರ್ಬಂಧಕ್ಕೂ ಒಳಗಾಗದೆ ಇರೋಣ, ಕೆಲಸ ಮಾಡೋಣ.
  2. by ourselves ನಾವೇ–ಸ್ವತಃ, ಸ್ವಂತವಾಗಿ; ಖುದ್ದಾಗಿ.