otter ಆಟರ್‍
ನಾಮವಾಚಕ
  1. ನೀರುನಾಯಿ; ನೀರುಬೆಕ್ಕು; ಉದ್ರ; ತುಪ್ಪುಳ ಚರ್ಮ, ಈಜುರೆಕ್ಕೆಯಂಥ ಕಾಲುಗಳು, ಜಾಲಪಾದಗಳು, ಉದ್ದನಾದ ಚಪ್ಪಟೆ ಬಾಲ–ಇವುಗಳುಳ್ಳ, ಮತ್ಸ್ಯಾಹಾರಿ ಜಲಚರ ಸಸ್ತನಿ.
  2. ಇದರ ತುಪ್ಪುಳು ಚರ್ಮ.
  3. ಎರೆಹಲಗೆ; ಮೀನು ಹಿಡಿಯಲು ಎರೆಯನ್ನು ನೀರಿನ ಮೇಲೆ ಒಯ್ಯುವ ಒಂದು ಬಗೆಯ ಹಲಗೆ, ಮಣೆ, ಸಲಕರಣೆ.
  4. ಸಿಡಿಗುಂಡುಗಳನ್ನು ತೆಗೆದು ಹಾಕಲು, ಮುಖ್ಯವಾಗಿ ನೌಕಾಸೈನ್ಯಕ್ಕೆ ಸೇರಿರದ, ದೋಣಿ, ಹಡಗು, ಮೊದಲಾದವುಗಳಲ್ಲಿ ಬಳಸುವ ಒಂದು ವಿಧವಾದ ಸಲಕರಣೆ.