ostracize ಆಸ್ಟ್ರಸೈಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪ್ರಾಚೀನ ಗ್ರೀಸಿನ ಅಥೆನ್ಸಿನಲ್ಲಿ) (ಬಲಿಷ್ಠ ದುಷ್ಟನನ್ನೋ ಜನಮೆಚ್ಚಿಕೆಯಿಲ್ಲದ ಪ್ರಜೆಯನ್ನೋ ವಿಶಿಷ್ಟ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಐದು ಯಾ ಹತ್ತು ವರ್ಷಕಾಲ) ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು.
  2. (ಸಮಾಜ, ಸ್ನೇಹ, ವಿಶ್ವಾಸ, ಸಾಮಾನ್ಯ ಹಕ್ಕುಬಾಧ್ಯತೆ, ಮೊದಲಾದಗಳಿಂದ) ಬಹಿಷ್ಕರಿಸು; ಹೊರ ಹಾಕು; ಬಹಿಷ್ಕಾರ ಹಾಕು.