ossify ಆಸಿಹೈ
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ ossifies, ಭೂತರೂಪ ಮತ್ತು ಭೂತಕೃದಂತ

ossified).

ಸಕರ್ಮಕ ಕ್ರಿಯಾಪದ
  1. ಅಸ್ಥೀಕರಿಸು; ಎಲುಬಾಗಿಸು; ಮೂಳೆಯಾಗಿಸು.
  2. ಗಡುಸಾಗಿಸು.
  3. ಜಡ್ಡುಗಟ್ಟಿಸು; ಮರಗಟ್ಟಿಸು.
ಅಕರ್ಮಕ ಕ್ರಿಯಾಪದ
  1. ಅಸ್ಥೀಭವಿಸು; ಎಲುಬಾಗು; ಮೂಳೆಯಾಗು; ಎಲುಬಾಗಿ ಪರಿವರ್ತನೆ ಹೊಂದು: cartilages ossify with age ಮೃದ್ವಸ್ಥಿಗಳು ದಿನಗಳೆದಂತೆ ಮೂಳೆಯಾಗುತ್ತವೆ.
  2. (ರೂಪಕವಾಗಿ) ಕಲ್ಲಾಗು; ಗಡುಸಾಗು.
  3. (ರೂಪಕವಾಗಿ) ಜಡ್ಡುಗಟ್ಟು; ಮರಗಟ್ಟು; ಸೂಕ್ಷ್ಮ ಸಂವೇದನೆಯನ್ನು ಕಳೆದುಕೊ: in this situation it is easy for the mind to ossify ಈ ಪರಿಸ್ಥಿತಿಯಲ್ಲಿ ಮನಸ್ಸು ಜಡ್ಡುಗಟ್ಟಿ ಹೋಗುವುದು ಸುಲಭ.