osculate ಆಸ್ಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಮುತ್ತಿಡು; ಚುಂಬಿಸು.
  2. (ಜ್ಯಾಮಿತಿ) (ವಕ್ರದ ವಿಷಯದಲ್ಲಿ) ಚುಂಬಿಸು; ಸ್ಪರ್ಶಿಸು; ಇನ್ನೊಂದು ವಕ್ರದೊಡನೆ ತಾಕಿಕೊಂಡಿದ್ದು ಅದೇ ಬಗೆಯ ವಕ್ರತೆಯನ್ನೂ ಒಂದೇ ಸ್ಪರ್ಶರೇಖೆಯನ್ನೂ ಪಡೆದಿರು.
ಅಕರ್ಮಕ ಕ್ರಿಯಾಪದ

(ಜೀವವಿಜ್ಞಾನ) (ಜಾತಿ ಮೊದಲಾದವುಗಳ ವಿಷಯದಲ್ಲಿ)

  1. ಮಧ್ಯಂತರ ಜಾತಿಯೊಂದರ ಮೂಲಕ ಸಂಬಂಧಿಸಿರು, ಸಂಬಂಧಪಡೆದಿರು.
  2. ಪರಸ್ಪರ ಯಾ ಇನ್ನೊಂದು ಜಾತಿಯೊಡನೆ ಸಮಾನ ಲಕ್ಷಣಗಳನ್ನು ಹೊಂದಿರು.