oscillate ಆಸಿಲೇಟ್‍
ಅಕರ್ಮಕ ಕ್ರಿಯಾಪದ
  1. (ವಿರಳವಾಗಿ ಸಕರ್ಮಕ ಕ್ರಿಯಾಪದ) ಲೋಲಕದಂತೆ ತೂಗು; ಜೋತಾಡು; ಓಲಾಡು; ತೂಗಾಡು; ಎರಡು ಬಿಂದುಗಳ ನಡುವೆ ಹಿಂದಕ್ಕೂ ಮುಂದಕ್ಕೂ ಚಲಿಸು, ಆಂದೋಲನ ಮಾಡು.
  2. ಡೋಲಾಯಮಾನನಾಗಿರು; ಅನಿಶ್ಚಿತನಾಗಿರು; (ತೀರ ವಿರುದ್ಧವಾದ ಪಕ್ಷಗಳ ಅಭಿಪ್ರಾಯ, ಕಾರ್ಯ, ಮೊದಲಾದವುಗಳ ನಡುವೆ) ತೂಗಾಡು.
  3. (ವಿದ್ಯುತ್ಪ್ರವಾಹದ ವಿಷಯದಲ್ಲಿ) ಆಂದೋಲಿಸು; ಆಂದೋಲನ ಮಾಡು:
    1. ವಿದ್ಯುತ್ಕಿಂಡಿ, ತೆರಪು, ಮೊದಲಾದ ಕಡೆ ಅಧಿಕ ಆವರ್ತನೆಯಲ್ಲಿ ದಿಕ್ಕು ಬದಲಾಯಿಸು.
    2. (ರೇಡಿಯೋ ಗ್ರಾಹಕದ ವಿಷಯದಲ್ಲಿ) ದೋಷಯುಕ್ತ ಕ್ರಿಯೆಯಿಂದಾಗಿ ವಿದ್ಯುತ್ಕಾಂತ ಅಲೆಗಳನ್ನು ಪ್ರೇರಿಸು.
  4. (ಭೌತವಿಜ್ಞಾನ) ನಿಯತಕ್ರಮದಲ್ಲಿ ಚಲಿಸು.