orthodox ಆರ್ತಡಾಕ್ಸ್‍
ಗುಣವಾಚಕ
  1. ಸಾಂಪ್ರದಾಯಿಕ:
    1. (ಮುಖ್ಯವಾಗಿ ಧಾರ್ಮಿಕ ತತ್ತ್ವ, ನೀತಿ, ಮೊದಲಾದ ವಿಷಯಗಳಲ್ಲಿ) ಸರಿಯಾದ ಯಾ ವಾಡಿಕೆಯಲ್ಲಿರುವ ಅಭಿಪ್ರಾಯಗಳನ್ನು ಹೊಂದಿರುವ.
    2. ಸ್ವತಂತ್ರಚಿಂತನೆಯದಲ್ಲದ; ಸ್ವಂತದ್ದಲ್ಲದ; ಹೊಸದಲ್ಲದ.
    3. ಧರ್ಮವಿರುದ್ಧ ಯಾ ಶಾಸ್ತ್ರ ವಿರುದ್ಧವಾಗಿಲ್ಲದ; ಯಥಾಶಾಸ್ತ್ರೀಯ; ಶಾಸ್ತ್ರಾನುಸಾರಿಯಾದ.
  2. (ಧಾರ್ಮಿಕ ಸಿದ್ಧಾಂತ, ನೈತಿಕ ಮಾನದಂಡ, ಮೊದಲಾದವುಗಳ ವಿಷಯದಲ್ಲಿ) ಸಾಂಪ್ರದಾಯಿಕ; ಶಾಸ್ತ್ರೀಯ; ಸರಿ ಅಥವಾ ಸತ್ಯ ಎಂದು ಸಾಮಾನ್ಯವಾಗಿ ಒಪ್ಪಿರುವ, ಅಂಗೀಕರಿಸಿರುವ; ಶಾಸ್ತ್ರೀಯವಾಗಿ, ಅಧಿಕೃತವಾಗಿ–ಸ್ಥಾಪಿತವಾದ, ಅಂಗೀಕೃತವಾದ.
  3. (Orthodox) (ಯೆಹೂದ್ಯ ಧರ್ಮದ ವಿಷಯದಲ್ಲಿ) ಪರಂಪರಾಗತ ಸಿದ್ಧಾಂತ ಮತ್ತು ಆಚರಣೆಗಳನ್ನು ಕಡುನಿಷ್ಠೆಯಿಂದ ಪಾಲಿಸುವ; ಕಟ್ಟಾ ಸಂಪ್ರದಾಯಬದ್ಧ; ಕಡುಸಂಪ್ರದಾಯ ನಿಷ್ಠ.
ಪದಗುಚ್ಛ

the Orthodox Church (= the Greek Church = Eastern Church) ಕಾನ್‍ಸ್ಟ್ಯಾಂಟಿನೋಪಲ್ಲಿನ ಚರ್ಚು; ಕಾನ್‍ಸ್ಟ್ಯಾಂಟಿನೋಪಲ್ಲಿನ ಚರ್ಚಿನ ಪ್ರಧಾನ ಪಾದ್ರಿಯನ್ನು ಕ್ಯಾಥೊಲಿಕ್‍ ಮತದ ಪ್ರಧಾನ ಅಧಿಕಾರಿಯೆಂದೂ ರಷ್ಯಾ, ರುಮೇನಿಯಾ, ಮೊದಲಾದ ದೇಶಗಳು ಈ ಚರ್ಚಿಗೆ ಅಧೀನವೆಂದು ಮಾನ್ಯ ಮಾಡಿರುವ ಪೂರ್ವ ರೋಮನ್‍ ಸಾಮ್ರಾಜ್ಯದ ಚರ್ಚು.