See also 2ornament
1ornament ಆರ್ನಮಂಟ್‍
ನಾಮವಾಚಕ
  1. (ಚರ್ಚು) (ಸಾಮಾನ್ಯವಾಗಿ ಬಹುವಚನದಲ್ಲಿ) ಪೂಜಾ ಸಾಧನಗಳು; ಪೂಜೋಪಕರಣಗಳು (ಉದಾಹರಣೆಗೆ ಬಲಿಪೀಠ, ಬಟ್ಟಲು, ಪಾತ್ರೆಗಳು, ಪವಿತ್ರ ಗ್ರಂಥಗಳು, ಮೊದಲಾದವು).
  2. (ಸಂಗೀತ) (ಬಹುವಚನದಲ್ಲಿ) ಅಲಂಕಾರ (ಸ್ವರ)ಗಳು; ಗಾಯನದ ಯಾ ವಾದನದ ಸೊಬಗನ್ನು ಹೆಚ್ಚಿಸಲು ಗಾಯಕನು ಯಾ ವಾದಕನು ರಚಿಸುವ, ಚಮತ್ಕಾರದಿಂದ ಕೂಡಿದ, ಸ್ವರ ಯೋಜನೆಗಳು.
  3. (ಏಕವಚನದಲ್ಲಿ ಮಾತ್ರ) ಅಲಂಕಾರ; ಸಿಂಗಾರ: a tower rich in ornament ಅಲಂಕಾರಗಳಿಂದ ಶ್ರೀಮಂತವಾಗಿರುವ ಗೋಪುರ; ಅಲಂಕಾರ ಸಿರಿಯುಳ್ಳ ಗೋಪುರ.
  4. ಆಭರಣ; ಒಡವೆ; ಅಲಂಕಾರಕ್ಕಾಗಿ ಬಳಸುವ ವಸ್ತು, ಮುಖ್ಯವಾಗಿ ಥಳುಕು ಪಳುಕಿನ ಒಡವೆ ಮೊದಲಾದವು: her only ornament was a brooch ಅವಳ ಏಕೈಕ ಒಡವೆಯೆಂದರೆ ಬ್ರೋಚು.
  5. ಭೂಷಣ; ಭೂಷಣಪ್ರಾಯ ವ್ಯಕ್ತಿ ಯಾ ಅಲಂಕಾರಪ್ರಾಯ ಗುಣ; ಅಂದಗೊಳಿಸುವ, ಗೌರವ ಮೊದಲಾದವನ್ನು ತರುವ–ಗುಣ ಯಾ ವ್ಯಕ್ತಿ: an ornament to her profession ಅವಳ ವೃತ್ತಿಗೆ ಒಂದು ಭೂಷಣ.
ಪದಗುಚ್ಛ
  1. more for ornament than for use ಉಪಯೋಗಕ್ಕಿಂತ ಹೆಚ್ಚಾಗಿ ಅಲಂಕಾರಕ್ಕಾಗಿ.
  2. ornament(s) rubric (ಕ್ರೈಸ್ತಧರ್ಮ) (ಪ್ರಾರ್ಥನಾ ಪುಸ್ತಕದಲ್ಲಿ ಪ್ರಾತಃ ಪ್ರಾರ್ಥನೆ ಮತ್ತು ಸಾಯಂ ಪ್ರಾರ್ಥನೆಗಳಿಗೆ ಸಂಬಂಧಿಸಿದ ವಿಧಿಗೆ ಹಿಂದಿನ) ಅಲಂಕೃತ ವಿಧಿ; ಕೆಂಪು ಅಕ್ಷರಗಳಲ್ಲಿರುವ ಕಟ್ಟಳೆ.
See also 1ornament
2ornament ಆರ್ನಮೆಂಟ್‍
ಸಕರ್ಮಕ ಕ್ರಿಯಾಪದ

ಅಲಂಕರಿಸು; ಸಿಂಗರಿಸು; ಅಂದಗೊಳಿಸು.