See also 2original
1original ಅರಿಜಿನಲ್‍
ಗುಣವಾಚಕ
  1. ಮೊದಲಿನಿಂದಲೂ ಇರುವ; ಆದಿಯ; ಆದಿಕಾಲದಿಂದಲೂ; ಆದಿಯಿಂದಲೂ ಇರುವ.
  2. ಆದ್ಯ; ಆದಿಮ.
  3. ಮೂಲಭೂತ; ಸ್ವರೂಪಭೂತ; ಸಹಜಸಿದ್ಧ.
  4. ಆರಂಭದ; ಪ್ರಾರಂಭಿಕ.
  5. ಅತ್ಯಂತ ಹಿಂದಿನ; ಪ್ರಾಚೀನತಮ.
  6. ಮಾದರಿಯಾಗಿ ಬಳಸಿರುವ; ಮಾತೃಕೆಯಾದ; ಮೂಲ: where is the original picture? ಮೂಲಚಿತ್ರವೆಲ್ಲಿ?
  7. (ನಕಲಿಗೆ ಯಾ ಭಾಷಾಂತರಕ್ಕೆ ಆಧಾರವಾದ) ಅಸಲಿನ; ಮೂಲದ: what does the Greek original say? ಗ್ರೀಕ್‍ ಮೂಲ ಏನು ಹೇಳುತ್ತದೆ?
  8. ಮೂಲ; ಸ್ವತಂತ್ರ; (ಬೇರೊಂದರಿಂದ) ಜನ್ಯವಾಗಿರದ ಯಾ (ಬೇರೊಂದರ) ಅನುಕರಣವಲ್ಲದ.
  9. (ಸ್ವರೂಪ ಯಾ ಶೈಲಿಯಲ್ಲಿ) ನೂತನ; ನವೀನ; ಹೊಸತಾದ: made a very original remark ಒಂದು ಬಹು ನೂತನ ಟೀಕೆಯನ್ನು ಮಾಡಿದನು.
  10. ಕಲ್ಪನಾತ್ಮಕ; ಸೃಜನಶೀಲ; ಸೃಷ್ಟಿಶೀಲ: original people do original things ಸ್ವಂತಿಕೆಯುಳ್ಳವರು ಸ್ವತಂತ್ರ(ಸೃಜನಶೀಲ) ಕೃತಿಗಳನ್ನು ಮಾಡುತ್ತಾರೆ.
  11. (ವಿಚಾರದಲ್ಲಿ ಯಾ ಕಾರ್ಯದಲ್ಲಿ) ಸ್ವಂತಿಕೆಯುಳ್ಳ; ಸ್ವೋಪಜ್ಞ; ಸ್ವತಂತ್ರ ಶಕ್ತಿಯುಳ್ಳ; ಸ್ವೋಪಜ್ಞತೆಯಿಂದ ಕೂಡಿದ: has an original mind ಸ್ವಂತಿಕೆಯ, ಸ್ವೋಪಜ್ಞ ಬುದ್ಧಿ ಇದೆ.
See also 1original
2original ಅರಿಜಿನಲ್‍
ನಾಮವಾಚಕ
  1. ಮಾದರಿ; ಮೂಲ ಮಾತೃಕೆ; (ನಕಲು ಮಾಡಲಾಗಿರುವುದರ) ಅಸಲು ವಸ್ತು ಯಾ ಪ್ರತಿ; ಮೂಲಪ್ರತಿ: several transcripts from the same original ಒಂದೇ ಮೂಲಪ್ರತಿಯಿಂದ ಮಾಡಿದ ಹಲವು ನಕಲುಗಳು. reads Don Quixote in the original ‘ಡಾನ್‍ ಕ್ವಿಕ್ಸೋಟ್‍’ ಕಥೆಯನ್ನು ಮೂಲದಲ್ಲೇ (ಮೂಲಭಾಷೆಯಲ್ಲೇ) ಓದುತ್ತಾನೆ.
  2. ವಿಚಿತ್ರ ವ್ಯಕ್ತಿ; ವಿಲಕ್ಷಣ ಪುರುಷ; ತಿಕ್ಕಲ.
  3. (ಪ್ರಸಿದ್ಧ ವಿನ್ಯಾಸಕನು ಉಡುಪು ಪ್ರದರ್ಶನಕ್ಕಾಗಿ ತಯಾರಿಸಿದ)
    1. ಮೂಲ ಮಾದರಿ (ಉಡುಪು, ವೇಷಭೂಷಣ).
    2. ಅದರ ನಕಲು, ಪಡಿಯುಡುಪು; ನಕಲುಡುಪು; ಉಡುಪಿನ ವೇಷ ಭೂಷಣದ ನಕಲು.