origin ಆರಿಜಿನ್‍
ನಾಮವಾಚಕ
  1. ಹುಟ್ಟು; ಉತ್ಪತ್ತಿ; ಉಗಮ; ಜನ್ಮ; ಉದಯ.
  2. (ಪದಗಳ ವಿಷಯದಲ್ಲಿ) ವ್ಯುತ್ಪತ್ತಿ; ನಿಷ್ಪತ್ತಿ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) (ವ್ಯಕ್ತಿಗಳ) ವಂಶ; ಕುಲ; ಮೂಲ; ವರ್ಗ: a man of humble origins ಕೆಳವರ್ಗದಲ್ಲಿ ಹುಟ್ಟಿದವನು.
  4. ಮೂಲ; ಉಗಮಸ್ಥಾನ; ಜನ್ಮಸ್ಥಾನ; ಹುಟ್ಟುವ ಸ್ಥಳ: a word of Latin origin ಲ್ಯಾಟಿನ್‍ನಿಂದ ಹುಟ್ಟಿದ ಪದ; ಲ್ಯಾಟಿನ್‍ ಮೂಲದ ಪದ.
  5. (ಅಂಗರಚನಾಶಾಸ್ತ್ರ) ಸಂಧಿಮೂಲ:
    1. ಸ್ನಾಯುವೊಂದು ಒಂದೆಡೆ ಭದ್ರವಾಗಿ ಸೇರಿರುವ ಸ್ಥಳ.
    2. ನರ ಯಾ ರಕ್ತನಾಳವೊಂದು ಆರಂಭವಾಗುವ ಯಾ ಅದು ಪ್ರಧಾನ ನರ ಅಥವಾ ಪ್ರಧಾನ ರಕ್ತನಾಳಗಳಿಂದ ಕವಲೊಡೆಯುವ ಸ್ಥಳ.
  6. (ಗಣಿತ) ಮೂಲ (ಬಿಂದು); ಯಾವ ಬಿಂದುವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕಗಳನ್ನು ಹೇಳುವೆವೋ ಆ ಬಿಂದು.