orientation ಆ(ಓ)ರಿಎಂಟೇಷನ್‍
ನಾಮವಾಚಕ
  1. ಪೂರ್ವಾಭಿಮುಖಗೊಳಿಸುವುದು.
  2. (ಒಂದರ) ಸ್ಥಾನವನ್ನು ನಿರ್ಣಯಿಸುವುದು; ನೆಲೆ ನಿರ್ಧರಿಸುವುದು.
  3. ನೆಲೆ; (ಒಂದಕ್ಕೆ) ಸಂಬಂಧಿಸಿದಂತೆ ಒಬ್ಬನ ಯಾ ಒಂದರ ಸ್ಥಿತಿ, ಸ್ಥಾನ.
  4. ನೆಲೆಯರಿವು; ನಿವಾಸಜ್ಞಾನ; ಪಕ್ಷಿ ಮೊದಲಾದವು ತಮ್ಮ ನಿವಾಸಕ್ಕೆ ಹಿಂತಿರುಗುವ ಮಾರ್ಗವನ್ನು ದೂರದಿಂದಲೇ ಕಂಡುಕೊಳ್ಳುವ ಶಕ್ತಿ.
  5. ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ (ಮುಖ್ಯವಾಗಿ ರಾಜಕೀಯವಾಗಿ ಯಾ ಮಾನಸಿಕವಾಗಿ ಒಬ್ಬನ)
    1. ದೃಷ್ಟಿ; ದೃಷ್ಟಿಕೋನ; ನಿಲುವು.
    2. ಹೊಂದಾಣಿಕೆ–ದೃಷ್ಟಿ, ಮನೋಭಾವ, ಮನೋಧರ್ಮ.
  6. (ವಿಷಯಕ್ಕೆ ಯಾ ಪರಿಸ್ಥಿತಿಗೆ) ಪರಿಚಯ; ಒಂದು ವಿಷಯ ಯಾ ಪರಿಸ್ಥಿತಿಯ ಬಗ್ಗೆ ಪರಿಚಯ ಮಾಡಿಸುವುದು ಯಾ ಪರಿಚಯ ಪಡೆಯುವುದು.