See also 2orient  3orient
1orient ಓರಿಅಂಟ್‍
ನಾಮವಾಚಕ
  1. (the Orient)
    1. (ಕಾವ್ಯಪ್ರಯೋಗ) ಮೂಡಲು; ಪೂರ್ವ; ಪೂರ್ವ ದಿಕ್ಕು.
    2. ಪೌರಸ್ತ್ಯ ದೇಶಗಳು; ಮೆಡಿಟರೇನಿಯನ್ನಿನ ಪೂರ್ವಕ್ಕಿರುವ ದೇಶಗಳು.
  2. ಪೂರ್ವ ದೇಶಗಳ ಮುತ್ತು.
See also 1orient  3orient
2orient ಓರಿಅಂಟ್‍
ಗುಣವಾಚಕ
  1. (ಕಾವ್ಯಪ್ರಯೋಗ) ಮೂಡಲ; ಪೂರ್ವದ; ಪೌರಸ್ತ್ಯ.
  2. (ಅಮೂಲ್ಯ ರತ್ನಗಳು ಮತ್ತು ಮುತ್ತುಗಳು ವಿಷಯದಲ್ಲಿ)
    1. ಮೊದಲಿಗೆ ಪೂರ್ವ ದೇಶಗಳಿಂದ ಬರುತ್ತಿದ್ದ.
    2. ಒಳ್ಳೆ ಹೊಳಪುಳ್ಳ ಕಾಂತಿಮಯ; ಥಳಥಳಿಸುವ.
    3. ಪ್ರಶಸ್ತ; ಅಮೂಲ್ಯ; ಅನರ್ಘ್ಯ; ಬೆಲೆವೆತ್ತ.
  3. (ಸೂರ್ಯ, ಹಗಲು, ಮೊದಲಾದವುಗಳ ವಿಷಯದಲ್ಲಿ) ಮೂಡುತ್ತಿರುವ; ಹುಟ್ಟುತ್ತಿರುವ; ಉದಯಿಸುತ್ತಿರುವ (ರೂಪಕವಾಗಿ ಸಹ).
See also 1orient  2orient
3orient ಓರಿಅಂಟ್‍
ಸಕರ್ಮಕ ಕ್ರಿಯಾಪದ
  1. (ಕಟ್ಟಡ, ಚರ್ಚು, ಮೊದಲಾದವನ್ನು) ಪೂರ್ವಾಭಿಮುಖಗೊಳಿಸು; ಪೂರ್ವಾಭಿಮುಖವಾಗಿರುವಂತೆ ಕಟ್ಟು.
  2. (ಶವದ ಪಾದವನ್ನು) ಮೂಡಲು (ದಿಕ್ಕಿ)ಗಿರಿಸಿ, ಪೂರ್ವಾಭಿಮುಖಗೊಳಿಸಿ ಸಮಾಧಿ ಮಾಡು.
  3. ದಿಕ್ಸೂಚಿಯ ನೆರವಿನಿಂದ (ಒಂದರ) ಸ್ಥಾನವನ್ನು ಗೊತ್ತು ಮಾಡು; ನಿರ್ಣಯಿಸು; (ಒಂದರ) ನೆಲೆ ನಿರ್ಧರಿಸು.
  4. (ತನ್ನನ್ನು, ವಿವಿಧ ವಸ್ತುಗಳು ಮೊದಲಾದವನ್ನು) ಸ್ಪಷ್ಟ ಸ್ಥಾನದಲ್ಲಿ, ನೆಲೆಯಲ್ಲಿ ಯಾ ಸಂಬಂಧದಲ್ಲಿ–ಇರಿಸು, ಸ್ಥಾಪಿಸು, ಇರುವಂತೆ ಮಾಡು.
  5. (ಒಂದರತ್ತ ಯಾ ಒಬ್ಬನತ್ತ) ತಿರುಗಿಸು; ಅಭಿಮುಖವಾಗಿಸು: orient the students towards science ವಿದ್ಯಾರ್ಥಿಗಳನ್ನು ವಿಜ್ಞಾನದತ್ತ ತಿರುಗಿಸು.
  6. ಉದ್ದೇಶಿಸು; ಗುರಿಯಾಗಿಸು: oriented towards the export side of business ರಹ್ತು ವ್ಯಾಪಾರದ ಕಡೆಗೆ ಗುರಿ ಹೊಂದಿದ್ದ.
ಅಕರ್ಮಕ ಕ್ರಿಯಾಪದ

ಪೂರ್ವಕ್ಕೆ ಯಾ ಯಾವುದೇ ಗೊತ್ತಾದ ದಿಕ್ಕಿಗೆ ತಿರುಗು, ಅಭಿಮುಖವಾಗು.

ಪದಗುಚ್ಛ

orient oneself

  1. ತನ್ನ ನೆಲೆಯನ್ನು ಕಂಡುಕೊ.
  2. ಪರಿಸರಕ್ಕೆ ಸಂಬಂಧಿಸಿದಂತೆ ತನ್ನ ಸ್ಥಾನವನ್ನು, ನೆಲೆಯನ್ನು, ನಿಲುವನ್ನು–ನಿರ್ಣಯಿಸಿಕೊ, ನಿರ್ಧರಿಸಿಕೊ.
  3. (ಹೊಸ ಪರಿಸ್ಥಿತಿಗೆ) ಹೊಂದಿಸಿಕೊ; ಒಗ್ಗಿಕೊ: took some time to orient himself to the new school ಹೊಸ ಶಾಲೆಗೆ ಒಗ್ಗಿಕೊಳ್ಳಲು ಸ್ವಲ್ಪ ಕಾಲ ತೆಗೆದುಕೊಂಡ.