orgy ಆರ್ಜಿ
ನಾಮವಾಚಕ
(ಬಹುವಚನ orgies).
  1. (ಗ್ರೀಕ್‍ ಪುರಾಣ ಮತ್ತು ರೋಮನ್‍ ಪುರಾಣ) (ಸಾಮಾನ್ಯವಾಗಿ ಬಹುವಚನದಲ್ಲಿ) ವಿವಿಧ ದೇವತೆಗಳ (ಮುಖ್ಯವಾಗಿ ಮದ್ಯದೇವ ಬ್ಯಾಕಸ್‍ ದೇವತೆಯ) ಪೂಜೆಯಲ್ಲಿ ನಡೆಯುತ್ತಿದ್ದ ಅತಿಯಾದ ಕುಡಿತ, ಕುಣಿತ, ಹಾಡುವುದು, ಮೊದಲಾದವುಗಳಿಂದ ಕೂಡಿದ ರಹಸ್ಯೋಪಾಸನೆ.
  2. ಉನ್ಮತ್ತೋತ್ಸವ; ಕಾಮಕೇಳಿ; ಸ್ವಚ್ಛಂದ ಸಮಾರಂಭ; ಕುಡಿತದ ಯಾ ಲೈಂಗಿಕ ಸ್ವೇಚ್ಛಾಚಾರದ ಉತ್ಸವಾಚರಣೆ.
  3. (ಬಹುವಚನದಲ್ಲಿ) ಸ್ವೈರ ಭೋಗ ಯಾ ಅತಿ ಲಂಪಟತೆ; ವ್ಯಭಿಚಾರ.
  4. ಯಾವುದೇ ಕಾರ್ಯದಲ್ಲಿ ಅತಿಲೋಲುಪತೆ, ಅತಿಯಾಗಿ ತೊಡಗುವಿಕೆ: orgy of killing ಹತ್ಯಾಕಾಂಡ.