organize ಆರ್ಗನೈಸ್‍
ಸಕರ್ಮಕ ಕ್ರಿಯಾಪದ
    1. ಸಾವಯವಗೊಳಿಸು; ಅಂಗಾಂಗಿಯನ್ನಾಗಿ ಮಾಡು.
    2. ಜೀವಿಯನ್ನಾಗಿ ಯಾ ಜೀವಂತ ಊತಕವನ್ನಾಗಿ, ಅಂಗಾಂಶವನ್ನಾಗಿ ಮಾಡು.
  1. (ವಿವಿಧ ಅಂಶಗಳನ್ನು, ಅಂಗಗಳನ್ನು ಸಂಯೋಜಿಸಿ) ಸಾವಯವ ಸಮಷ್ಟಿಯನ್ನು–ರಚಿಸು, ಸಂಘಟಿಸು.
  2. ವ್ಯವಸ್ಥೆಗೊಳಿಸು; ಸಂಘಟಿಸು; ಸಂಯೋಜಿಸು; ಕ್ರಮಬದ್ಧವಾದ ರಚನೆ ಕಲ್ಪಿಸು.
  3. (ವ್ಯಕ್ತಿಯೊಬ್ಬನ ಯಾ ತನ್ನ) ವ್ಯವಹಾರಗಳನ್ನು–ಕ್ರಮಗೊಳಿಸು, ಕ್ರಮಬದ್ಧವಾಗಿರುವಂತೆ ಮಾಡು.
  4. (ವ್ಯಕ್ತಿಯೊಬ್ಬನಿಗೆ) ಅನುಕೂಲಗಳನ್ನು ಏರ್ಪಡಿಸು.
  5. (ಯೋಜನೆ ಮೊದಲಾದವುಗಳಿಗೆ) ವ್ಯವಸ್ಥೆಮಾಡು; (ಅವನ್ನು) ಏರ್ಪಡಿಸು; ಪ್ರಾರಂಭಿಸು.
  6. (ಹಲವು ಸಲ ಕರ್ಮರಹಿತವಾಗಿ ಪ್ರಯೋಗ)
    1. (ಕಾರ್ಮಿಕ ಸಂಘ, ರಾಜಕೀಯಪಕ್ಷ, ಮೊದಲಾದವುಗಳಿಗೆ) ಸದಸ್ಯರನ್ನು–ಕೂಡಿಸು, ಸೇರಿಸು.
    2. ಕಾರ್ಮಿಕ ಸಂಘ ಯಾ ರಾಜಕೀಯ ಪಕ್ಷವನ್ನು–ಕಟ್ಟು, ರಚಿಸು.
ಅಕರ್ಮಕ ಕ್ರಿಯಾಪದ

ಸಾವಯವ ಸಮಷ್ಟಿಯಾಗು.