organism ಆರ್ಗನಿಸಮ್‍
ನಾಮವಾಚಕ
  1. ಜೀವಿ:
    1. ಪರಸ್ಪರಾವಲಂಬಿಗಳಾದ ಭಾಗಗಳಿಂದ ಸುಸಂಬದ್ಧವಾಗಿ ರಚಿತವಾಗಿ, ಪ್ರಾಣದಿಂದ ಕೂಡಿರುವ ವಸ್ತು.
    2. ಯಾವುದೇ ಪ್ರಾಣಿ ಯಾ ಸಸ್ಯ.
  2. (ಪ್ರಾಣಿಯ ಯಾ ಸಸ್ಯದ) ಭೌತದೇಹ; ಶರೀರ.
  3. ಸಾವಯವಿ; (ಜೀವಿಗೆ ಹೋಲಿಸಬಹುದಾದ) ಪರಸ್ಪರಾವಲಂಬಿಗಳಾದ ಭಾಗಗಳುಳ್ಳ ಒಂದು ಸಮಷ್ಟಿ ಯಾ ವ್ಯವಸ್ಥೆ: the governmental organism ಸರಕಾರೀ ವ್ಯವಸ್ಥೆ.