organic ಆರ್ಗ್ಯಾನಿಕ್‍
ಗುಣವಾಚಕ
  1. (ಶರೀರ ವಿಜ್ಞಾನ) ದೈಹಿಕ; ಆಂಗಿಕ; ಆವಯವಿಕ; ಅಂಗಾಂಗಗಳ, ಅವಕ್ಕೆ ಸಂಬಂಧಿಸಿದ: organic changes caused by emotion ಭಾವೋದ್ರೇಕದಿಂದ ಉಂಟಾದ ದೈಹಿಕ ಬದಲಾವಣೆಗಳು.
  2. (ಪ್ರಾಣಿಯ ಯಾ ಸಸ್ಯದ ವಿಷಯದಲ್ಲಿ)
    1. ಅಂಗಯುಕ್ತ; ಸಾವಯವ; ಅಂಗಗಳಿರುವ.
    2. ವ್ಯವಸ್ಥಿತವಾದ ಅಂಗಗಳಿಂದ ರಚಿತವಾದ; ಅವಯವ ಘಟಿತ; ಆಂಗಿಕ; ಆವಯವಿಕ: organic structure of animals and plants ಸಸ್ಯ ಮತ್ತು ಪ್ರಾಣಿಗಳ ಆಂಗಿಕ, ಆವಯವಿಕ ರಚನೆ.
  3. (ರೋಗಶಾಸ್ತ್ರ) (ವ್ಯಾಧಿಯ ವಿಷಯದಲ್ಲಿ) ಅಂಗವಿಕೃತ; ಆಂಗಿಕ ವ್ಯತ್ಯಾಸಜನ್ಯ; ಅಂಗವಿಕೃತಿಜನ್ಯ; ಅಂಗದ ರಚನೆಯಲ್ಲಾಗಿರುವ ಬದಲಾವಣೆಯಿಂದುಂಟಾದ.
  4. ಜೈವಿಕ:
    1. ಜೀವಿಗಳಿಗೆ ಸಂಬಂಧಿಸಿದ: organic remains ಜೈವಿಕ ಅವಶೇಷಗಳು.
    2. (ಕೃಷಿ) ರಾಸಾಯನಿಕ ಗೊಬ್ಬರ, ಕೀಟನಾಶಕ, ಮೊದಲಾದವನ್ನು ಬಳಸದೆ ಬೆಳೆದ, ಉತ್ಪಾದಿಸಿದ: organic farming ಜೈವಿಕ ಕೃಷಿ. organic manure ಜೈವಿಕ ಗೊಬ್ಬರ.
    3. ಜೀವಿಯಂತೆ ಬೆಳೆಯುವ ಮತ್ತು ವಿಕಾಸವಾಗುವ: an organic view of history ಇತಿಹಾಸದ ಬಗ್ಗೆ ಜೈವಿಕ (ಜೀವಿಯಂತೆ ಬೆಳೆದು ವಿಕಾಸವಾಗುತ್ತದೆ ಎಂಬ) ದೃಷ್ಟಿ, ಅಭಿಪ್ರಾಯ.
  5. (ರಸಾಯನವಿಜ್ಞಾನ) ಕಾರ್ಬನಿಕ:
    1. (ಸಂಯುಕ್ತಗಳ ವಿಷಯದಲ್ಲಿ) ಕಾರ್ಬನ್‍ ಉಳ್ಳ, ಮುಖ್ಯವಾಗಿ ಕಾರ್ಬನ್‍ ಪರಮಾಣುವಿಗೆ ಹೈಡ್ರೋಜನ್‍ ಬಂಧಿಸಿರುವ: organic compounds ಕಾರ್ಬನಿಕ ಸಂಯುಕ್ತಗಳು.
    2. ಕಾರ್ಬನಿಕ ಸಂಯುಕ್ತಗಳ, ಅವಕ್ಕೆ ಸಂಬಂಧಿಸಿದ: organic chemistry ಕಾರ್ಬನಿಕ ರಸಾಯನ ವಿಜ್ಞಾನ.
  6. (ಒಂದರಲ್ಲಿ) ಅಂಶವಾದ; ಆಂತರಿಕ; ಸ್ವರೂಪಭೂತ; ಆಂಗಿಕ.
  7. ಸುಸಂಘಟಿತ; ಸುವ್ಯವಸ್ಥಿತ; ಸುಸಂಯೋಜಿತ: organic unity ಸುಸಂಘಟಿತ ಏಕತೆ, ಐಕಮತ್ಯ. organic whole ಸುಸಂಯೋಜಿತ–ಸಮಷ್ಟಿ, ಅಖಂಡತೆ, ಪೂರ್ಣತೆ.
  8. (ನ್ಯಾಯಶಾಸ್ತ್ರ) ದೇಶದ ರಾಜ್ಯಾಂಗನ್ಯಾಯಕ್ಕೆ, ಕಾನೂನುಗಳಿಗೆ ಸಂಬಂಧಿಸಿದ.