organ ಆರ್ಗನ್‍
ನಾಮವಾಚಕ
  1. ಆರ್ಗನ್‍ (ವಾದ್ಯ); ತಿದಿಯೊತ್ತಿ ಕೀಲಿಕೈಗಳ ಮೂಲಕ ಪಿಳ್ಳಂಗೋವಿಗಳಲ್ಲಿ ಗಾಳಿ ಹರಿಸಿ ವಾದಿಸುವ, ವಿಶೇಷ ರೀತಿಯ ನಾದವುಳ್ಳ ಒಂದು ವಾದ್ಯ.
  2. ಇಂಥದೇ ನಾದ ಹೊರಡಿಸುವ ವಿದ್ಯುದುಪಕರಣ.
  3. = barrel-organ.
  4. ಹಾರ್ಮೋನಿಯಮ್‍ ವಾದ್ಯ; ಲೋಹದ ನಾಲಿಗೆಗಳಿಂದ ನಾದಗಳು ಹುಟ್ಟುವಂತೆ ಕೀಲಿಕೈಗಳನ್ನಳವಡಿಸಿದ ಮಣೆಯುಳ್ಳ ಒಂದು ಗಾಳಿವಾದ್ಯ.
  5. ಅಂಗ; ಅವಯವ; ಸಾಮಾನ್ಯವಾಗಿ ವಿಶಿಷ್ಟವಾದ ಒಂದು ಕಾರ್ಯಮಾಡುವ ದೇಹ ಭಾಗ: vocal organs ಉಚ್ಚಾರಣಾಂಗಗಳು. disgestive organs ಜೀರ್ಣಾಂಗಗಳು.
  6. (ಮುಖ್ಯವಾಗಿ ಹಾಸ್ಯ ಪ್ರಯೋಗ) ಶಿಶ್ನ; ಪುರುಷ ಜನನಾಂಗ.
  7. (ಪ್ರಾಚೀನ ಪ್ರಯೋಗ) (ಒಬ್ಬನ) ಶಾರೀರ; ಧ್ವನಿ; ಕಂಠ: has a magnificent organ (ಅವನಿಗೆ) ಅದ್ಭುತವಾದ ಶಾರೀರವಿದೆ.
  8. ವಾರ್ತಾವಾಹಕ ಯಾ ಅಭಿಪ್ರಾಯ ವಾಹಕ; (ಮುಖ್ಯವಾಗಿ ಒಂದು ಪಕ್ಷ, ಧ್ಯೇಯ, ಪಂಥ, ಉದ್ದೇಶ, ಮೊದಲಾದವುಗಳ) ಪ್ರಚಾರ ಪತ್ರಿಕೆ.
  9. (ಪ್ರಾಚೀನ ಪ್ರಯೋಗ) (ನಿರ್ದಿಷ್ಟ ಸಾಮರ್ಥ್ಯದ ಸ್ಥಾನವೆಂದು ಭಾವಿಸಲಾಗಿದ್ದ) ಮೆದುಳಿನ ಭಾಗ.
ಪದಗುಚ್ಛ
  1. choir organ ಮೇಳದ ಆರ್ಗನ್‍.
  2. organs of digestion ಜೀರ್ಣಾಂಗಗಳು; ಪಚನಾಂಗಗಳು.
  3. organs of generation ಜನನಾಂಗಗಳು.
  4. organs of perception ಸಂವೇದನಾಂಗಗಳು.
  5. organs of speech ವಾಗವಯವಗಳು.
  6. mouth organ ಮಕ್ಕಳ (ಆಟದ) ರಾಗಮಾಲಿಕೆ.
  7. pedal organ ಕಾಲುತುಳಿಯುವ, ಪಾದಮರ್ದಿತ ಆರ್ಗನ್‍(ವಾದ್ಯ).