See also 2ordinary
1ordinary ಆರ್ಡಿನರಿ
ಗುಣವಾಚಕ
  1. ಯಥಾಕ್ರಮದ ಯಥಾಸ್ಥಿತಿಯ.
    1. ಸಾಮಾನ್ಯ; ಸಾಧಾರಣ; ವಾಡಿಕೆಯ; ಮಾಮೂಲಿನ; ರೂಢಿಯಾಗಿರುವ; ಬಳಕೆಯಲ್ಲಿರುವ: in the ordinary course of events ಘಟನೆಗಳ ಸಾಧಾರಣ ರೂಢಿಯ ಕ್ರಮದಲ್ಲಿ.
    2. ನೀರಸ; ಸರ್ವಸಾಮಾನ್ಯ; ವಿಶೇಷವಲ್ಲದ; ಅಸಾಧಾರಣವಲ್ಲದ: ordinary people ಸಾಮಾನ್ಯಜನ.
  2. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ನ್ಯಾಯಾಧೀಶನ ವಿಷಯದಲ್ಲಿ) ಪ್ರತ್ಯಕ್ಷ ಯಾ ಪದನಿಮಿತ್ತ ಅಧಿಕಾರವುಳ್ಳ (ಬೇರೊಬ್ಬರ ಪ್ರತಿನಿಧಿಯಾಗಿ ಬಂದದ್ದಲ್ಲದ).
  3. (ಸ್ಟಾಕು, ಷೇರು, ಮೊದಲಾದವುಗಳ ವಿಷಯದಲ್ಲಿ) ಸಾಮಾನ್ಯ; ವಿಶೇಷ ಸವಲತ್ತುಗಳಿಲ್ಲದ.
ಪದಗುಚ್ಛ
  1. in ordinary (ಬ್ರಿಟಿಷ್‍ ಪ್ರಯೋಗ) ಸ್ಥಾಯಿಯಾದ; ಕಾಯಂ ಆದ; (ತಾತ್ಕಾಲಿಕ ಇಲ್ಲವೆ ವಿಶೇಷ ರೀತಿಯ ನೇಮಕವಲ್ಲದೆ) ಸಾಮಾನ್ಯ ರೀತಿಯಲ್ಲಿ (ಮುಖ್ಯವಾಗಿ ರಾಜಮನೆತನಕ್ಕೆ) ನೇಮಕವಾದ: physician in ordinary ಸ್ಥಾಯಿ, ಕಾಯಂ–ವೈದ್ಯ.
  2. in the ordinary way ಸಾಮಾನ್ಯ ಪರಿಸ್ಥಿತಿಯಲ್ಲಿ; ರೂಢಿಯ ಸಂದರ್ಭದಲ್ಲಿ. in the ordinary way I should refuse ಸಾಮಾನ್ಯ ಪರಿಸ್ಥಿತಿಯಲ್ಲಿ ನಾನು ನಿರಾಕರಿಸುತ್ತಿದ್ದೆ, ನಿರಾಕರಿಸಬೇಕಾಗುತ್ತಿತ್ತು.
  3. Lord Ordinary (ಸ್ಕಾಟ್ಲೆಂಡು) ಅತ್ಯುನ್ನತ ಸಿವಿಲ್‍ ನ್ಯಾಯಸ್ಥಾನವಾದ ಕೋರ್ಟ್‍ ಆಹ್‍ ಸೆಷನ್ನಿನ ಐದು ಜನ ನ್ಯಾಯಮೂರ್ತಿಗಳಲ್ಲಿ ಒಬ್ಬ.
  4. ordinary level (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮಾನ್ಯ ದರ್ಜೆ; GCE ಪರೀಕ್ಷೆಯ ಮೂರು ಮಟ್ಟಗಳಲ್ಲಿ ತಳಗಡೆಯದು, ಕೊನೆಯದು.
  5. ordinary scale ದಶಮಾಂಶ ಶ್ರೇಣಿ; ಸಾಮಾನ್ಯ ಮಾನಪದ್ಧತಿ; ಸಂಖ್ಯೆಯಲ್ಲಿನ ಸ್ಥಾನಗಳು ಬಲದಿಂದ ಎಡಕ್ಕೆ ಸರಿದಂತೆ ಏಕ, ದಶ, ಶತ, ಸಹಸ್ರ, ಇತ್ಯಾದಿಗಳನ್ನು ಸೂಚಿಸುವ ದಶಮಾನ ಪದ್ಧತಿ.
  6. ordinary seaman (ಹಡಗಿನ) ಅತ್ಯಂತ ಕೆಳ ದರ್ಜೆಯ ನಾವಿಕ.
  7. ordinary shares (ಬ್ರಿಟಿಷ್‍ ಪ್ರಯೋಗ) ಸಾಧಾರಣ ಷೇರುಗಳು; ನಿವ್ವಳ ಲಾಭದಿಂದ ಲಾಭಾಂಶ ಪಡೆಯಬಹುದಾದ ಹಕ್ಕುಳ್ಳ ಷೇರುಗಳು.
  8. out of the ordinary ಅಸಾಮಾನ್ಯ; ಅಸಾಧಾರಣ; ವಿಶೇಷ: something out of the ordinary ಅಸಾಧಾರಣ ವಿಷಯ, ಸಂಗತಿ.
See also 1ordinary
2ordinary ಆರ್ಡಿನರಿ
ನಾಮವಾಚಕ
(ಬಹುವಚನ ordinaries).
  1. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ಪದನಿಮಿತ್ತ, ಸ್ಥಾನನಿಮಿತ್ತ–ಅಧಿಕಾರಿ; (ಬೇರೊಬ್ಬರ ಪ್ರತಿನಿಧಿಯಾಗಿ ಅಲ್ಲದೆ) ತನ್ನ ಸ್ಥಾನದಿಂದ ಪಡೆದ ಅಧಿಕಾರವುಳ್ಳವನು, ಮುಖ್ಯವಾಗಿ ನ್ಯಾಯಾಧೀಶ.
  2. (Ordinary) (ಕ್ರೈಸ್ತಧರ್ಮ)
    1. ಪೂಜಾವಿಧಿ (ಗ್ರಂಥ).
    2. ದಿನದಿಂದ ದಿನಕ್ಕೆ ಬದಲಾಗದ ಪೂಜೆಯ ನಿತ್ಯವಿಧಿ; ಮುಖ್ಯವಾಗಿ ಪ್ರಭುಭೋಜನ ಸಂಸ್ಕಾರದ ಪೂಜಾವಿಧಿ ನಿಯಮ.
  3. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ)
    1. (ಭೋಜನಶಾಲೆಯಲ್ಲಿ) ಗೊತ್ತಾದ ಕಾಲಕ್ಕೆ, ಗೊತ್ತಾದ ಬೆಲೆಗೆ ಬಡಿಸುವ ಊಟ; ಸಾಮಾನ್ಯ ಊಟ; ಸಾರ್ವಜನಿಕ ಊಟ.
    2. ಇದನ್ನು ಒದಗಿಸುವ ಹೋಟೆಲು.
  4. (ಅಮೆರಿಕನ್‍ ಪ್ರಯೋಗ) ಹೋಟೆಲು.
  5. (ವಂಶಲಾಂಛನ ವಿದ್ಯೆ) (ಅತ್ಯಂತ ಪ್ರಾಚೀನವೂ, ಸರಳವೂ, ಸಾಧಾರಣವೂ ಆದ) ಸಾಮಾನ್ಯ ಲಾಂಛನ.
  6. (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಆರ್ಡಿನರಿ; ಒಂದು ಚಕ್ರ ಬಹುದೊಡ್ಡದೂ ಇನ್ನೊಂದು ಬಹುಸಣ್ಣದೂ ಆದ, ಹಿಂದಿನ ಕಾಲದ ಬೈಸಿಕಲ್ಲು. Figure: ordinary-6
ಪದಗುಚ್ಛ

the Ordinary

  1. ಪ್ರಾಂತೀಯ ಆರ್ಚ್‍ಬಿಷಪ್‍.
  2. ಜಿಲ್ಲೆಯ ಆರ್ಚ್‍ಬಿಷಪ್‍.