See also 2orderly
1orderly ಆರ್ಡರ್‍ಲಿ
ಗುಣವಾಚಕ
  1. ಕ್ರಮಬದ್ಧವಾಗಿ ಜೋಡಿಸಿದ, ಅಳವಡಿಸಿದ, ಅಣಿಗೊಳಿಸಿದ; ಒಪ್ಪ ಓರಣಗೊಳಿಸಿದ; ವ್ಯವಸ್ಥೆಗೊಳಿಸಿದ; ವ್ಯವಸ್ಥಿತ.
  2. ಕ್ರಮಬದ್ಧವಾಗಿ, ನಿಯಮಬದ್ಧವಾಗಿ–ನಡೆದುಕೊಳ್ಳುವ; ನಿಯಮಗಳಿಗೆ ವಿಧೇಯ; ಶಿಸ್ತು ಪಾಲಿಸುವ.
  3. (ಸೈನ್ಯ)
    1. ಆಜ್ಞೆಯ; ಆಜ್ಞೆಗಳಿಗೆ ಸಂಬಂಧಿಸಿದ.
    2. ಆಜ್ಞಾವಾಹಕ; ಆಜ್ಞೆಯನ್ನು ಮುಟ್ಟಿಸುವ ಕರ್ತವ್ಯವುಳ್ಳ.
    3. ಆಜ್ಞಾಪಾಲನೆಯ; ಆಜ್ಞೆಯನ್ನು ಪರಿಪಾಲಿಸಬೇಕಾದ.
ಪದಗುಚ್ಛ
  1. orderly bin (ಬೀದಿಯ) ಕಸದ ತೊಟ್ಟಿ.
  2. orderly book (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಆಜ್ಞಾಪುಸ್ತಕ; ಆಜ್ಞೆಗಳನ್ನು ದಾಖಲಿಸುವ ಸೇನಾಪಡೆಯ ಪುಸ್ತಕ.
  3. orderly officer (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಅಂದಿನ (ದಿನದ) ಅಧಿಕಾರಿ.
  4. orderly room (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಪಡೆಯ ಕಚೇರಿ; ಸೈನಿಕ ಪಡೆಗಳ ನಿವಾಸದಲ್ಲಿ ಅವುಗಳಿಗೆ ಸಂಬಂಧಿಸಿದ ಕಾರುಬಾರನ್ನು ನಡೆಸುವ ಕೋಣೆ.
See also 1orderly
2orderly ಆರ್ಡರ್‍ಲಿ
ನಾಮವಾಚಕ
(ಬಹುವಚನ orderlies).
  1. (ಸೈನ್ಯ) ಅಧಿಕಾರಿಯ ಬಳಿಯಲ್ಲೇ ಇದ್ದು ಅವನ ಅಪ್ಪಣೆಗಳನ್ನು ನಡೆಸುವ ಸೈನಿಕ; ಆಜ್ಞಾವಾಹಕ; ತೈನಾತಿ.
  2. (ಆಸ್ಪತ್ರೆಯಲ್ಲಿ) ಗುಡಿಸುವವನು; ಚೊಕ್ಕಟಮಾಡುವವನು.