See also 2order
1order ಆರ್ಡರ್‍
ನಾಮವಾಚಕ
  1. ಶ್ರೇಣಿ; ಸೋಪಾನ; ಸಾಲು; ಪಂಕ್ತಿ (ಈಗ ವಿರಳ ಪ್ರಯೋಗ): order on order of sculptured figures ಶ್ರೇಣಿಯ ಮೇಲೆ ಶ್ರೇಣಿಯಾಗಿದ್ದ ಶಿಲ್ಪಕೃತಿಗಳು.
  2. ಸಾಮಾಜಿಕ ವರ್ಗ, ದರ್ಜೆ, ಅಂತಸ್ತು: the higher orders ಮೇಲ್ದರ್ಜೆಗಳು.
  3. ಬಗೆ; ತರಹ; ಪ್ರಕಾರ; ರೀತಿ: talents of a high order ಉನ್ನತ ಮಟ್ಟದ ಸಹಜ ಶಕ್ತಿಗಳು.
  4. (ದೇವತಾ)ವರ್ಗ; ‘ಸೆರಾಹಿಮ್‍’, ‘ಚೆರುಬಿಮ್‍’, ಮೊದಲಾದ ಒಂಬತ್ತು ವರ್ಗದ ದೇವತೆಗಳಲ್ಲಿ ಯಾವುದೇ ವರ್ಗ.
  5. (ಕ್ರೈಸ್ತ ಪಾದ್ರಿಗಳ) ವರ್ಗ; ಶ್ರೇಣಿ; ದರ್ಜೆ; ಬಿಷಪ್‍, ಡೀಕನ್‍, ಮೊದಲಾದ ಬೇರೆ ಬೇರೆ ದರ್ಜೆಗಳಲ್ಲಿ ಒಂದು: (holy) orders ಪಾದ್ರಿ ಪದವಿ, ಹುದ್ದೆ.
  6. (ಮಾಂಕ್‍ಗಳು, ಹ್ರಯರ್‍ಗಳು ಮತ್ತು ಹಿಂದೆ (ಕ್ರೈಸ್ತ) ಧರ್ಮವೀರರು, ಮೇಸನರು, ಮೊದಲಾದವರ) ವರ್ಗ; ದಳ; ಪಂಥ: Franciscan order ಸಂತ ಹಾನ್ಸಿಸ್ಸನ ವರ್ಗ, ದಳ, ಪಂಥ.
  7. (ರಾಜನಿಂದ ಬಿರುದು ಮೊದಲಾದವುಗಳನ್ನು ಪಡೆದು ಸನ್ಮಾತಿತರಾದವರ)
    1. ವರ್ಗ; ಶ್ರೇಣಿ: Order of the Garter ಗಾರ್ಟರ್‍ ವರ್ಗ.
    2. ಇಂಥ ವರ್ಗದವರ ಲಾಂಛನ: wears the order of the Golden Fleece ‘ಗೋಲ್ಡನ್‍ ಹ್ಲೀಷ್‍’ ವರ್ಗದ ಲಾಂಛನವನ್ನು ಧರಿಸುತ್ತಾನೆ.
  8. (ವಾಸ್ತುಶಿಲ್ಪ) ರೀತಿ; ಶೈಲಿ: five (classical) orders ಐದು ಅಭಿಜಾತ ಶೈಲಿಗಳು (ಡೋರಿಕ್‍, ಅಯಾನಿಕ್‍, ಕೊರಿಂತಿಯನ್‍, ಟಸ್ಕನ್‍ ಮತ್ತು ಕಾಂಪೊಸಿಟ್‍). Figure: orders-8
  9. (ಗಣಿತ) ದರ್ಜೆ:
    1. ಯಾವುದೇ ಬೀಜಗಣಿತೋಕ್ತಿಯಲ್ಲಿರುವ ಪದಗಳಲ್ಲಿ ಕಾಣಬರುವ ಅತ್ಯುನ್ನತ ಘಾತ: $\left(ax^2+bx+c\right)$ is an equation of the second order. $\left(ax^2+bx+c\right)$ ಎಂಬುದು ಎರಡನೆ ದರ್ಜೆಯ ಗಣಿತೋಕ್ತಿ.
    2. (ಯಾವುದೇ ಮೊತ್ತದ ಪ್ರಮಾಣವನ್ನು ನಿರ್ದೇಶಿಸುವ) ದರ್ಜೆ; ಮಟ್ಟ: the wavelength of visible light is of the order of thousand angstroms ದೃಶ್ಯ ಬೆಳಕಿನ ಅಲೆಯುದ್ದ ಹಲವು ಸಾವಿರ ಆಂಗ್‍ಸ್ಟ್ರಾಮ್‍ಗಳ ದರ್ಜೆಯದು.
  10. (ಜೀವವಿಜ್ಞಾನ) ಗಣ; ಪ್ರಾಣಿಗಳ ವರ್ಗೀಕರಣದಲ್ಲಿ ವರ್ಗಕ್ಕಿಂತ ಕೆಳಗಿನದು ಮತ್ತು ವಂಶಕ್ಕಿಂತ ಮೇಲಿನದು.
  11. (ಸಾಮಾನ್ಯವಾಗಿ 10ರ ಗುಣದ, ಗಾತ್ರದ ಆಧಾರದ ಮೇಲೆ ವರ್ಗೀಕರಿಸಿದ ಪದ್ಧತಿ ಯಾ ವ್ಯವಸ್ಥೆಯಲ್ಲಿನ) ವರ್ಗ: order of magnitude ಗಾತ್ರದ ಆಧಾರದ ಮೇಲೆ, ಸಾಮಾನ್ಯವಾಗಿ 10ರ ಘಾತದ ಆಧಾರದ ಮೇಲೆ, ವರ್ಗೀಕರಿಸಲಾಗುವ ಪದ್ಧತಿಯ ಒಂದು ವರ್ಗ.
  12. ಕ್ರಮ; ಅನುಕ್ರಮ: alphabetical order ಅಕಾರಾದಿ ಕ್ರಮ.
  13. ವ್ಯವಸ್ಥಿತ ಕ್ರಮ; ವ್ಯವಸ್ಥೆ; ಪ್ರತಿಯೊಂದು ಅಂಶ, ಭಾಗ, ಮೊದಲಾದವು ತಮ್ಮ ಉಚಿತ ಸ್ಥಾನದಲ್ಲಿರುವ ಸ್ಥಿತಿ: love of order (ಉತ್ತಮ) ವ್ಯವಸ್ಥೆಯ ಪ್ರೇಮ.
  14. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಕಾರ್ಯಕ್ರಮ; ವಿಧಾನ: take order to do (ಯಾವುದನ್ನೇ) ಮಾಡಲು (ಅಗತ್ಯವಾದ) ಕಾರ್ಯಕ್ರಮವನ್ನು ಅನುಸರಿಸು.
  15. ಜಗತ್ತು, ಸಮಾಜ, ಮೊದಲಾದವುಗಳ ಸ್ವರೂಪ ಯಾ ವ್ಯವಸ್ಥೆ, ಕ್ರಮ: the moral order of the world ಜಗತ್ತಿನ ನೈತಿಕ ವ್ಯವಸ್ಥೆ.
  16. (ಶಾಸನಸಭೆ ಮೊದಲಾದವುಗಳಲ್ಲಿ ಅನುಸರಿಸಬೇಕಾದ ನಿಯಮಾವಳಿಗಳು, ಕಾರ್ಯವಿಧಾನ, ಮೊದಲಾದವುಗಳ) ಶಿಸ್ತು; ಕ್ರಮ; ಪರಿಪಾಟ; ರೀತಿ: Order! Order! ಶಿಸ್ತು! ಶಿಸ್ತು!.
  17. ಶಾಂತಿವ್ಯವಸ್ಥೆ; ಶಾಂತಿ (ಪರಿಸ್ಥಿತಿ); ಗಲಭೆ, ಗೊಂದಲಗಳು ಇಲ್ಲದೆ, ಕಾನೂನುಗಳನ್ನು ಪಾಲನೆ ಮಾಡುತ್ತ ಇರುವ ಸ್ಥಿತಿ: law and order ಶಾಂತ ಸ್ಥಿತಿ; ಶಾಸನ ಬದ್ಧ ವ್ಯವಸ್ಥೆ; ಶಾಂತಿ: law and order was restored ಶಾಂತಿಯನ್ನು ಪುನಃ ಸ್ಥಾಪಿಸಲಾಯಿತು. keep order ಶಾಂತಿ (ಸ್ಥಿತಿ) ಪಾಲಿಸಿ.
  18. (ಸೈನ್ಯ) ಸಾಲು; ಪಂಕ್ತಿ; ಶ್ರೇಣಿ; ಸೈನಿಕರನ್ನು ಜೋಡಿಸಿರುವ ಕ್ರಮ: open order ತೆರೆದ ಸಾಲು; ವಿರಳ ಸಾಲು; ಸೈನಿಕ–ಸೈನಿಕರ ನಡುವೆ ಅಂತರವಿರುವಂತೆ ನಿಲ್ಲಿಸಿದ ಸೈನಿಕರ ಸಾಲು. close order ಮುಚ್ಚಿದ ಸಾಲು; ಒತ್ತು ಸಾಲು; ಸೈನಿಕರೆಲ್ಲ ಒತ್ತಾಗಿ, ನಡುವೆ ಅಂತರ ಇಲ್ಲದೆ ನಿಲ್ಲುವ ಸಾಲು.
  19. (ಬಹುವಚನದಲ್ಲಿ ಸಹ) ಕಟ್ಟುಪಾಡು; ಕಟ್ಟಳೆ; ಅಪ್ಪಣೆ; ಆಜ್ಞೆ; ಆದೇಶ; ಹುಕುಮು: gave orders ಅಪ್ಪಣೆ, –ಕೊಟ್ಟ. till further orders ಮುಂದಿನ ಆದೇಶದವರೆಗೆ.
  20. (ಬ್ಯಾಂಕಿಂಗ್‍ ಮೊದಲಾದವುಗಳ) ನಿರ್ದೇಶ; ಸೂಚನೆ.
  21. (ವಾಣಿಜ್ಯ)
    1. ಕೋರಿಕೆ; ನಿರ್ದೇಶ; ಸೂಚನೆ; ಆರ್ಡರು; ವ್ಯಾಪಾರಿಗೋ ತಯಾರಕನಿಗೋ ಯಾವುದೇ ಸರಕನ್ನು ಸರಬರಾಜು ಮಾಡುವಂತೆ ಕಳುಹಿಸಿದ ಸೂಚನೆ.
    2. ಹಾಗೆ ಒದಗಿಸಿದ ಸರಕು ಮೊದಲಾದವುಗಳ ಮೊತ್ತ.
  22. (ನಾಟಕ ಯಾ ಸಂಗೀತ ಶಾಲೆ, ಮ್ಯೂಸಿಯಮ್‍, ಖಾಸಗಿ ಮನೆ, ಮೊದಲಾದವುಗಳಿಗೆ ಶುಲ್ಕರಹಿತವಾಗಿ ಯಾ ಅಲ್ಪ ಶುಲ್ಕಕ್ಕೆ ಯಾ ಒಂದು ಹಕ್ಕಾಗಿ, ಪ್ರವೇಶಿಸಲು ಕೊಡುವ) ಪ್ರವೇಶಪತ್ರ; ಅಪ್ಪಣೆ ಚೀಟಿ; ಪಾಸು.
  23. (ಕ್ರೈಸ್ತಧರ್ಮ) ಧಾರ್ಮಿಕ ವಿಧಿ; ವಿಧ್ಯುಕ್ತವಾದ ಕರ್ಮವಿಧಾನ: the order of confirmation (ಜ್ಞಾನಸ್ನಾನವಾದವರಿಗೆ ನೀಡುವ) ಸ್ಥಿರೀಕರಣ ಸಂಸ್ಕಾರ ವಿಧಿ.
ಪದಗುಚ್ಛ
  1. a large order (ಆಡುಮಾತು) ಕಷ್ಟವಾದ ಕೆಲಸ; ದುಷ್ಕರ ಕಾರ್ಯ.
  2. by order (ಅಧಿಕೃತ ಅಧಿಕಾರಿಯ) ಅಪ್ಪಣೆಯ ಪ್ರಕಾರ; ಆಜ್ಞಾನುಸಾರ.
  3. call to order (ಚೇರ್‍ಮನ್ನನ ವಿಷಯದಲ್ಲಿ) (ಸಭೆಯು) ಆರಂಭವಾಯಿತೆಂದು ಘೋಷಿಸು.
  4. holy orders (ಆಂಗ್ಲಿಕನ್‍ ಚರ್ಚಿನ) ಧಾರ್ಮಿಕ ಸ್ಥಾನಗಳು; ಬಿಷಪ್‍, ಪ್ರೀಸ್ಟ್‍ ಮತ್ತು ಡೀಕನ್‍ ಎಂಬ ದರ್ಜೆಗಳು.
  5. in bad order ಸರಿಯಾಗಿ ಕೆಲಸ ಮಾಡುತ್ತಿಲ್ಲದ; ಕೆಟ್ಟಿರುವ.
  6. in (good) order ಸರಿಯಾದ ವ್ಯವಸ್ಥೆ ಇರುವ; ಸುಸ್ಥಿತಿಯಲ್ಲಿರುವ; ಚೆನ್ನಾಗಿ ಕೆಲಸ ಮಾಡುವಂತಿರುವ; ಬಳಸುವ ಸ್ಥಿತಿಯಲ್ಲಿರುವ.
  7. in (holy) orders ದೀಕ್ಷೆ ಪಡೆದು; ದೀಕ್ಷಿತನಾಗಿ.
  8. in order ಕ್ರಮಬದ್ಧವಾಗಿರುವ.
  9. in order that ಉದ್ದೇಶದಿಂದ; (ಯಾವುದನ್ನೇ) ಮಾಡಲು, ಮಾಡುವುದಕ್ಕಾಗಿ, ಮಾಡುವುದಕ್ಕೋಸ್ಕರ, ಮಾಡುವ ಸಲುವಾಗಿ.
  10. in order to = ಪದಗುಚ್ಛ\((9)\).
  11. in the order of
    1. ಸುಮಾರಾಗಿ; ಅಂದಾಜಿನಲ್ಲಿ.
    2. ಹೇಳಿರುವ, ಸೂಚಿಸಿರುವ–ಪ್ರಮಾಣದಲ್ಲಿ, ಗಾತ್ರದಲ್ಲಿ.
  12. in working order (ಸರಿಯಾಗಿ) ಕೆಲಸ ಮಾಡುತ್ತಿರುವ; ಸುಸ್ಥಿತಿಯಲ್ಲಿರುವ.
  13. keep order ಶಿಸ್ತು ಸ್ಥಾಪಿಸು; ಕ್ರಮಬದ್ಧವಾದ ನಡವಳಿಕೆಯನ್ನು ಅನುಸರಿಸುವಂತೆ ಮಾಡು.
  14. made to order
    1. ನಿರ್ದೇಶದಂತೆ ಮಾಡಿದ; ಹೇಳಿದಂತೆ ಮಾಡಿದ.
    2. (ರೂಪಕವಾಗಿ) ಅಪೇಕ್ಷಿತ; ಅಪೇಕ್ಷಿಸಿರುವುದಕ್ಕೆ ಸರಿಯಾಗಿರುವ, ತಕ್ಕುದಾಗಿರುವ.
  15. minor orders (ರೋಮನ್‍ ಕ್ಯಾಥೊಲಿಕ್‍ ಚರ್ಚಿನ) ಸಾಮಾನ್ಯ ಸ್ಥಾನಗಳು; ಡೀಕನ್‍ ಎಂಬುದಕ್ಕಿಂತ ಕೆಳಗಿನ ದರ್ಜೆಗಳು.
  16. money order (ಹಣವನ್ನು ವಿಳಾಸದಾರನಿಗೆ ಕೊಡುವಂತೆ ಅಂಚೆ ಕಚೇರಿಯ ಕೊಡುವ, ಬೇರೊಬ್ಬರಿಗೆ ವರ್ಗಾಯಿಸಲಾಗದ) ಮನಿಆರ್ಡರು.
  17. not in order = ಪದಗುಚ್ಛ\((26)\).
  18. of the order of = ಪದಗುಚ್ಛ\((11)\).
  19. on order (ಸರಕುಗಳ ವಿಷಯದಲ್ಲಿ) ಕೋರಿದ; ಕಳುಹಿಸುವಂತೆ ಆದೇಶ ಕೊಟ್ಟಿರುವ, ಆದರೆ ಇನ್ನೂ ಪಡೆದಿಲ್ಲದ.
  20. on the order of = ಪದಗುಚ್ಛ\((11)\).
  21. order cheque ಆರ್ಡರ್‍ ಚೆಕ್ಕು; ಹಣ ಪಡೆಯುವವನು ಹಣ ಪಡೆಯುವ ಮೊದಲು ರುಜು ಮಾಡಿಕೊಡಬೇಕಾದ ಚೆಕ್ಕು.
  22. Order in Council (ಬ್ರಿಟಿಷ್‍ ಪ್ರಯೋಗ) ಪ್ರಿವಿ ಕೌನ್ಸಿಲ್ಲಿನ ಸಲಹೆಯ ಮೇರೆಗೆ ಯಾವುದೇ ಆಡಳಿತದ ವಿಷಯದಲ್ಲಿ ರಾಜನು ಮಾಡುವ ರಾಜಾಜ್ಞೆ.
  23. Order of the $^1$bath.
  24. order of the day
    1. ದಿನದ ಕಾರ್ಯಕ್ರಮ; ನಡೆಸಲು ಗೊತ್ತುಪಡಿಸಿರುವ ಕೆಲಸ.
    2. (ರೂಪಕವಾಗಿ) ಸದ್ಯದ ಸ್ಥಿತಿ; ಇಂದಿನ, ವರ್ತಮಾನ ಪರಿಸ್ಥಿತಿ; ಪ್ರಚಲಿತ ವಿದ್ಯಮಾನ: cricket is the order of the day ಕ್ರಿಕೆಟ್‍ ಆಟ ಈಗಿನ, ಇಂದಿನ, ಚಾಲ್ತಿ ಷೋಕಿ ಆಗಿದೆ.
    3. (ರೂಪಕವಾಗಿ) ಕೈಗೊಳ್ಳಬೇಕಾದ ಕಾರ್ಯದ ಮುಖ್ಯ ವಿಚಾರ.
    4. ನಿರ್ಧಾರಿತ ಕಾರ್ಯಕ್ರಮ; ಗೊತ್ತು ಪಡಿಸಿದ, ತೀರ್ಮಾನಿಸಿದ–ಕಾರ್ಯವಿಧಾನ.
  25. order to view ಗಿರಾಕಿಯು ಕಟ್ಟಡವನ್ನು ಪರೀಕ್ಷಿಸಲು ಮನೆ ದಳ್ಳಾಳಿಯ ಕೋರಿಕೆ.
  26. out of order ವ್ಯವಸ್ಥೆ ಕೆಟ್ಟಿರುವ; ಸರಿಯಾಗಿ ಕೆಲಸ ಮಾಡುತ್ತಿಲ್ಲದ.
  27. postal order (ಬ್ರಿಟಿಷ್‍ ಪ್ರಯೋಗ) (ಹಣವನ್ನು ವಿಳಾಸದಾರನಿಗೆ ಕೊಡುವಂತೆ ಅಂಚೆ ಕಚೇರಿಯು ಕೊಡುವ, ಬೇರೊಬ್ಬರಿಗೆ ವರ್ಗಾಯಿಸಲಾಗದ) ಅಂಚೆಆರ್ಡರು.
  28. post-office order = ಪದಗುಚ್ಛ\((27)\).
  29. review order ಪ್ರದರ್ಶನ ಕಾಲದಲ್ಲಿ ಸೈನಿಕರು ಧರಿಸಬೇಕಾದ ಉಡುಪು ಮತ್ತು ಶಸ್ತ್ರಗಳು.
  30. rise to a point of order = ಪದಗುಚ್ಛ\((31)\).
  31. rise to order (ನಿಯಮಾವಳಿಯ ಪ್ರಕಾರ) ಕ್ರಮಬದ್ಧತೆಯನ್ನು ಪ್ರಶ್ನಿಸಲು ಏಳು.
  32. take holy orders ಪಾದ್ರಿಯ ದೀಕ್ಷೆ ಪಡೆ.
  33. take orders
    1. ಆದೇಶಗಳನ್ನು, ನಿರೂಪಗಳನ್ನು–ಒಪ್ಪಿ ಕಾರ್ಯರೂಪಕ್ಕೆ ತರು, ಕಾರ್ಯಗತಗೊಳಿಸು.
    2. ಆದೇಶಗಳನ್ನು ಪಡೆ; ಆಜ್ಞೆಗಳನ್ನು ಸ್ವೀಕರಿಸು.
    3. = ಪದಗುಚ್ಛ\((32)\).
  34. tall order ಮಿತಿಮೀರಿದ ಯಾ ಅತಿ ದುಬಾರಿಯ ಬೇಡಿಕೆ.
  35. point of order (ಸಭೆಯ ಕಾರ್ಯಕಲಾಪದ ವಿಷಯದಲ್ಲಿ) ಕ್ರಮಬದ್ಧತೆಯ ಪ್ರಶ್ನೆ; ನಿಯಮದ ವಿಷಯ, ವಿಚಾರ; ಹೇಳಿದ್ದು ಯಾ ಮಾಡಿದ್ದು ಕ್ರಮಬದ್ಧವಾಗಿದೆಯೇ ನಿಯಮಬದ್ಧವಾಗಿದೆಯೇ ಎಂಬ ಪ್ರಶ್ನೆ, ಕೇಳಿಕೆ.
See also 1order
2order ಆರ್ಡರ್‍
ಸಕರ್ಮಕ ಕ್ರಿಯಾಪದ
  1. ಕ್ರಮಗೊಳಿಸು; ವ್ಯವಸ್ಥೆಗೊಳಿಸು; ಅಣಿ ಮಾಡು; ಗೊತ್ತಿಗೆ ತರು; (ಪ್ರಾಚೀನ ಪ್ರಯೋಗ) has ordered his troops ತನ್ನ ಪಡೆಗಳನ್ನು ವ್ಯವಸ್ಥೆಗೊಳಿಸಿದ್ದಾನೆ, ಸನ್ನದ್ಧಗೊಳಿಸಿದ್ದಾನೆ.
  2. (ದೇವರು, ವಿಧಿ, ಮೊದಲಾದವುಗಳ ವಿಷಯದಲ್ಲಿ) ವಿಧಿಸು; ನಿಯಮಿಸು; ನಿಯಾಮಕ ಮಾಡು: so we hoped, but it was otherwise ordered ಹಾಗೆಯೇ ನಾವು ಆಶಿಸಿದ್ದೆವು, ಆದರೆ ವಿಧಿಯು ಬೇರೆ ರೀತಿ ನಿಯಾಮಕ ಮಾಡಿತ್ತು; ದೈವನಿಯತಿ ಬೇರೆಯಾಗಿತ್ತು.
  3. ಆಜ್ಞೆ ಮಾಡು; ಕಟ್ಟಳೆ ಮಾಡು; ಹುಕಮ್‍ ಕೊಡು; ವಿಧಿಸು: order a retreat ಹಿಮ್ಮೆಟ್ಟಲು ಆಜ್ಞಾಪಿಸು. ordered him a mustard plaster ಸಾಸಿವೆಯ ಪಟ್ಟು (ಪೋಲ್ಟಿಸ್‍) ಹಾಕಿಕೊಳ್ಳಬೇಕೆಂದು ಅವನಿಗೆ (ವೈದ್ಯನು) ವಿಧಿಸಿದನು.
  4. (ವ್ಯಕ್ತಿ ಮೊದಲಾದವರನ್ನು ಒಂದೆಡೆಗೆ ಯಾ ಒಂದೆಡೆಯಿಂದ ಹೋಗೆಂದು) ಆಜ್ಞಾಪಿಸು; ಅದೇಶ ಕೊಡು: was ordered to Egypt ಈಜಿಪ್ಟಿಗೆ ಹೋಗಬೇಕೆಂದು ಆಜ್ಞಾಪಿಸಲಾಯಿತು.
  5. (ವ್ಯಾಪಾರಿ, ಆಳು, ಮೊದಲಾದವರಿಗೆ ವಸ್ತುಗಳನ್ನು ಒದಗಿಸಬೇಕೆಂದು) ಅಪ್ಪಣೆ ಮಾಡು; ಗೊತ್ತು ಮಾಡು.
ಪದಗುಚ್ಛ
  1. order about
    1. ಅತ್ತ ಇತ್ತ ಹೋಗೆಂದು ಆಜ್ಞಾಪಿಸು.
    2. (ರೂಪಕವಾಗಿ) ಸುತ್ತಾಡಿಸು.
    3. (ಮೇಲೆ) ಅಧಿಕಾರ ಚಲಾಯಿಸು.
  2. order arms ಬಂದೂಕದ ಬುಡವನ್ನು ನೆಲಕ್ಕಿಟ್ಟು ನಿಲ್ಲಿಸಿ ಬಂದೂಕು ತನ್ನ ಬಲಕ್ಕೆ ತಾಕುವಂತೆ ಹಿಡಿದುಕೊ.